×
Ad

ಇಟ್ಟಿಗೆಗಳ ಬದಲಿಗೆ ಬಾಟಲಿಗಳನ್ನು ಬಳಸಿ ಶೌಚಾಲಯ ಕಟ್ಟಿಸಲು ಮುಂದಾದ ಶಾಲೆ!

Update: 2017-05-17 20:12 IST
ಸಾಂದರ್ಭಿಕ ಚಿತ್ರ

ಜಮ್ಶೇಡ್ ಪುರ, ಮೇ 17: ಇಲ್ಲಿನ ಸ್ಥಳೀಯ ಶಾಲೆಯೊಂದರಲ್ಲಿ ಶೌಚಾಲಯದ ಸಮಸ್ಯೆಯಿಂದ ಕಂಗೆಟ್ಟಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಬಳಸಿ ಎಸೆದ ಪ್ಲಾಸ್ಟಿಕ್ ಬಾಟಲ್ ಗಳು ಹೊಸ ಭರವಸೆಯೊಂದನ್ನು ಮೂಡಿಸಿದೆ. ಇಲ್ಲಿನ ಮಾನವ್ ವಿಕಾಸ್ ಶಾಲೆಯಲ್ಲಿ ಒಂದೇ ಶೌಚಾಲಯವಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿತ್ತು. ನಿವೃತ್ತ ಉದ್ಯೋಗಸ್ಥರೇ ನಡೆಸುತ್ತಿರುವ ಶಾಲೆ ಇದೀಗ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಇಟ್ಟಿಗೆಗಳ ಬದಲಿಗೆ ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಸಿ ಶೌಚಾಲಯಗಳನ್ನು ಕಟ್ಟಲಿದ್ದಾರೆ.

ಬಾಟಲ್ ಗಳಲ್ಲಿ ಮರಳು ಹಾಗೂ ಕಬ್ಬಿಣದ ಅದಿರಿನ ದೂಳು ತುಂಬಿಸಿ ಇಟ್ಟಿಗೆಗಳಾಗಿ ಬಳಸಲಾಗುತ್ತದೆ. ಈ ರೀತಿಯ ಪ್ರಯೋಗದಿಂದ ಪರಿಸರದ ಸ್ವಚ್ಛತೆ ಕಾಪಾಡಲೂ ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಯ ಕ್ಯಾಂಪ್ ಕಚೇರಿಯ ಡೆಪ್ಯುಟಿ ಕಲೆಕ್ಟರ್ ಸಂಜಯ್ ಕುಮಾರ್ ಪಾಂಡೆ ಹೇಳುತ್ತಾರೆ. ಬಳಸದೆ ಎಸೆಯುವ ವಸ್ತುಗಳನ್ನು ಉಪಯೋಗಕಾರಿ ಕೆಲಸಗಳಿಗೂ ಬಳಸಬಹುದು ಎನ್ನುವ ಅರಿವನ್ನೂ ಈ ಪ್ರಯೋಗ ಮೂಡಿಸಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ.

ನಗರದ ಹಿಲ್ ಟಾಪ್ ಶಾಲೆಯ ವಿದ್ಯಾರ್ಥಿನಿ ಮೊಂದ್ರಿತಾ ಚಟರ್ಜಿ ಹಾಗೂ ಆಕೆಯ ಕುಟುಂಬಸ್ಥರು ಶೌಚಾಲಯ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಭರಿಸಲು ಮುಂದಾಗಿದ್ದಾರೆ. ಕೆಲವೇ ದಿನಗಳೊಳಗಾಗಿ ಕಾಮಗಾರಿ ಆರಂಭವಾಗಲಿದ್ದು, ಜೂನ್ 5ರ ವಿಶ್ವ ಪರಿಸರ ದಿನದಂದು ಮುಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News