×
Ad

ನೀರಿಗೆ ಬಿದ್ದು ಮೃತಪಟ್ಟ ಹಿರಿಯ ಪತ್ರಕರ್ತ ಕುಮಾರ್

Update: 2017-05-17 21:51 IST

 ಚೆನ್ನೈ, ಮೇ 17: ಹಿರಿಯ ಪತ್ರಕರ್ತ ಸಿ.ಪಿ.ಪ್ರದೀಪ್ ಕುಮಾರ್ (58 ವರ್ಷ) ಅವರು ಅಡ್ಯಾರ್ ನದಿಗೆ ಬಿದ್ದು ಮೃತಪಟ್ಟಿದ್ದಾರೆ.

 ಸೇತುವೆಯ ತಡೆಪಟ್ಟಿ ಕಿರಿದಾಗಿದ್ದು ಸೇತುವೆಯಲ್ಲಿ ಸಾಗುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಸ್ಥಳೀಯ ಇಂಗ್ಲಿಷ್ ದಿನಪತ್ರಿಕೆಯೊಂದರ ಕ್ರೀಡಾ ವಿಭಾಗದ ಮುಖ್ಯಸ್ಥರಾಗಿದ್ದ ಇವರು ಎರಡು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದರು. ತಮ್ಮ 30 ವರ್ಷಗಳ ಸೇವಾವಧಿಯಲ್ಲಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ಟೈಮ್ಸ್ ಆಫ್ ಇಂಡಿಯ, ಸ್ಟೇಟ್ಸ್‌ಮನ್’ ಮುಂತಾದ ದಿನಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಇವರ ಪತ್ನಿ ಸ್ಮಿತಾ ಪುದುಚೇರಿ ಸರಕಾರದ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News