ಯಶಸ್ವಿಯಾಯಿತು ಇಸ್ಲಾಂ ಸ್ವೀಕರಿಸುವ ಬೆದರಿಕೆ: ವಾಲ್ಮೀಕಿ ಸಮುದಾಯಕ್ಕೆ ಸಿಕ್ಕಿತು ಕ್ಷೌರದ ಭಾಗ್ಯ

Update: 2017-05-17 18:48 GMT

ಸಂಭಾಲ್, ಮೇ 17: ಕೀಳು ವರ್ಗಕ್ಕೆ ಸೇರಿದವರು ಎಂಬ ಕಾರಣ ನೀಡಿ ಆ ಗ್ರಾಮದ ವಾಲ್ಮೀಕಿ ಸಮುದಾಯದ ಜನರಿಗೆ ಹಲವು ದಶಕಗಳಿಂದ ಸೆಲೂನ್‌ನಲ್ಲಿ ತಲೆಕೂದಲು ಕತ್ತರಿಸುವುದು , ಗಡ್ಡ ತೆಗೆಯುವುದು ಇತ್ಯಾದಿಗೆ ಅವಕಾಶ ಇರಲಿಲ್ಲ.

 ಇದರಿಂದ ರೋಸಿ ಹೋದ ವಾಲ್ಮೀಕಿ ಸಮುದಾಯದವರು, ಇದೇ ಪರಿಸ್ಥಿತಿ ಮುಂದುವರಿದರೆ ತಾವು ಇಸ್ಲಾಮ್ ಧರ್ಮಕ್ಕೆ ಮತಾಂತರವಾಗದೆ ಅನ್ಯಮಾರ್ಗವಿಲ್ಲ ಎಂದು ಮಂಗಳವಾರ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆ ಒಂದೇ ದಿನದಲ್ಲಿ ಪರಿಣಾಮ ಬೀರಿದೆ. ವಾಲ್ಮೀಕಿ ಜನಾಂಗದವರಿಗೆ ಸೆಲೂನ್‌ಗಳಲ್ಲಿ ಪ್ರವೇಶ ನಿಷೇಧಿಸುವಂತಿಲ್ಲ ಮತ್ತು ಅವರ ತಲೆಕೂದಲು ಕತ್ತರಿಸಲು ಅಥವಾ ಗಡ್ಡ ತೆಗೆಯಲು ಸೆಲೂನ್‌ನವರು ನಿರಾಕರಿಸುವಂತಿಲ್ಲ ಎಂದು ಜಿಲ್ಲಾಡಳಿತ ಮತ್ತು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

    ಇದು ಉ.ಪ್ರದೇಶದ ಸಂಭಾಲ್ ಎಂಬಲ್ಲಿರುವ ಫತೇಪುರ್ ಶಂಸೊಯಿ ಎಂಬ ಗ್ರಾಮದಲ್ಲಿ ನಡೆದ ಘಟನೆ. ಗ್ರಾಮದಲ್ಲಿ 15000 ಠಾಕುರ್ ಮತ್ತು ಬ್ರಾಹ್ಮಣ ಸಮುದಾಯದವರು, 1,250 ವಾಲ್ಮೀಕಿ ಸಮುದಾಯದವರು ಇದ್ದಾರೆ. ಈ ಗ್ರಾಮದ ಸೆಲೂನ್‌ಗಳಲ್ಲಿ ವಾಲ್ಮೀಕಿ ಸಮುದಾಯದವರ ತಲೆಕೂದಲು ಕತ್ತರಿಸಿದರೆ ಕತ್ತರಿ ಅಶುದ್ಧವಾಗುತ್ತದೆ. ಆ ಬಳಿಕ ನಾವು ತಲೆಕೂದಲು ಕತ್ತರಿಸೋಲ್ಲ ಎಂದು ಮೇಲ್ವರ್ಗದವರು ಎಚ್ಚರಿಸಿದ್ದ ಕಾರಣ ಹಲವು ದಶಕಗಳಿಂದಲೂ ಇಲ್ಲಿಯ ಸೆಲೂನ್‌ಗಳಿಗೆ ವಾಲ್ಮೀಕಿಗಳಿಗೆ ಪ್ರವೇಶ ಇರಲಿಲ್ಲ. ಅವರು 15ರಿಂದ 20 ಕಿ.ಮೀ. ದೂರದ ಮತ್ತೊಂದು ನಗರಕ್ಕೆ ತೆರಳಿ ಅಲ್ಲಿ ತಲೆಗೂದಲು ಕತ್ತರಿಸಬೇಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News