1,500 ಕೋಟಿಯ ಸಾಮ್ರಾಜ್ಯ: ‘ಬಾಹುಬಲಿ’ಗೆ ಪಾಕಿಸ್ತಾನದಲ್ಲೂ ಬಲ

Update: 2017-05-18 16:08 GMT

ಹೊಸದಿಲ್ಲಿ, ಮೇ 18: ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿರುವ ‘ಬಾಹುಬಲಿ-2’ ಇದೀಗ ಮತ್ತೊಂದು ಮೈಲುಗಲ್ಲನ್ನು ಕ್ರಮಿಸಿದೆ. ಮೊನ್ನೆ ಮೊನ್ನೆಯವರೆಗೂ ಸಾವಿರ ಕೋಟಿ ಗಳಿಕೆಯ ಭಾರತದ ಏಕಮಾತ್ರ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದ್ದ ‘ಬಾಹುಬಲಿ-2’ ಒಂದೂವರೆ ಸಾವಿರ ಕೋಟಿಯ ಗಳಿಕೆಯನ್ನು ಮೀರಿದೆ.

ಭಾರತ ಮಾತ್ರವಲ್ಲದೆ, ಪಾಕಿಸ್ತಾನದ ಸುಮಾರು 100 ಥಿಯೇಟರ್ ಗಳಲ್ಲಿ ‘ಬಾಹುಬಲಿ-2’ ಪ್ರದರ್ಶನವಾಗುತ್ತಿದೆ. ಅಷ್ಟೂ ಸ್ಕ್ರೀನ್ ಗಳಲ್ಲೂ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದ್ದು, ಬಾಹುಬಲಿಯ ಪರಾಕ್ರಮಕ್ಕೆ ಸಾಕ್ಷಿಯಾಗಿದೆ. ಮೇ ಆರಂಭದಲ್ಲಿ  ಪಾಕಿಸ್ತಾನದಲ್ಲೂ  ತೆರೆಕಂಡಿರುವ ‘ಬಾಹುಬಲಿ-2’ ಈಗಾಗಲೇ 5 ಕೋಟಿ ರೂ. ಗಳಿಸಿದೆಯಂತೆ. ಭಾರತದ ಚಿತ್ರವೊಂದು ಪಾಕಿಸ್ತಾನದಲ್ಲೂ ಉತ್ತಮ ಗಳಿಕೆ ನಡೆಸುತ್ತಿರುವುದು ವಿಶೇಷವೇ ಸರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News