ರಿಯಾಝ್ ಮೌಲವಿ ಕೊಲೆ: ಎಸ್‌ಡಿಪಿಐನಿಂದ ನಾಳೆ ಜಾಥಾ
ಕ್ಯಾಲಿಕಟ್,ಮೇ 19: ಕಾಸರಗೋಡಿನಲ್ಲಿ ರಿಯಾಝ್ ಮೌಲವಿಯನ್ನು ಮಸೀದಿಗೆ ನುಗ್ಗಿ ಕೊಲೆಗೈದ ಪ್ರಕರಣದ ಎಲ್ಲಾ ಆರೋಪಿಗಳನ್ನುಬಂಧಿಸಬೇಕೆಂದುಆಗ್ರಹಿಸಿ ಎಸ್‌ಡಿಪಿಐ ಶನಿವಾರ ಕ್ಯಾಲಿಕಟ್ ಉತ್ತರ ವಲಯ ಎಡಿಜಿಪಿ ಕಚೇರಿಗೆ ಜಾಥಾ ನಡೆಸಲಿದೆ ಎಂದು ಸಂಘಟನೆಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೊಲೆನಡೆದು ಎರಡು ತಿಂಗಳು ಕಳೆಯಿತು. ಕೇವಲ ವಿಚಾರಣೆಯ ಪ್ರಹಸನವಷ್ಟೇ ನಡೆದಿದೆ. ಪ್ರಕರಣ ಬುಡಮೇಲುಗೊಳಿಸುವ ಯತ್ನವೂ ಆಗುತ್ತಿದೆ ಎಂದು ಎಸ್‌ಡಿಪಿಐ ನಾಯಕರು ಆರೋಪಿಸಿದರು. ಮೌಲವಿಯ ಕೊಲೆಯಲ್ಲಿ ಕೇರಳದ ಮತ್ತು ಕೇರಳದ ಹೊರಗಿನ ಸಂಘಪರಿವಾರದ ನಾಯಕರು ಶಾಮೀಲಾಗಿದ್ದಾರೆಎಂದು ಎಸ್‌ಡಿಪಿಐ ಹೇಳಿದೆ.
ಶನಿವಾರ ಬೆಳಗ್ಗೆ 10:30ಕ್ಕೆ ಕ್ಯಾಲಿಕಟ್ ಸ್ಟೇಡಿಯಂ ಪರಿಸರದಲ್ಲಿ ರಾಜ್ಯ ಅಧ್ಯಕ್ಷ ಪಿ. ಅಬ್ದುಲ್ ಮಜೀದ್ ಜಾಥಾವನ್ನು ಉದ್ಘಾಟಿಸಲಿರುವರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ಮ್ಯಾನೇಜ್‌ಕುಮಾರ್, ನಾಯಕರಾದ ಪಿ. ಅಬ್ದುಲ್ ಹಮೀದ್, ಎನ್.ಯು. ಅಬ್ದುಸ್ಸಲಾಂ, ಮುಸ್ತಫಾ ಕೊಮ್ಮೆರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.