×
Ad

ಕಮಲ್‌ಜೀತ್ ಸೆಹ್ರಾವತ್‌ ದಕ್ಷಿಣ ದಿಲ್ಲಿಯ ನೂತನ ಮೇಯರ್‌

Update: 2017-05-19 14:52 IST

ಹೊಸದಿಲ್ಲಿ, ಮೇ 19: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ  ಜಯ ಗಳಿಸಿದ್ದ ಬಿಜೆಪಿ ಕೌನ್ಸಿಲರ್‌ ಕಮಲ್‌ಜೀತ್  ಸೆಹ್ರಾವತ್‌  ಅವರು ದಕ್ಷಿಣ ದಿಲ್ಲಿಯ ನೂತನ ಮೇಯರ್‌ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದೇ ವೇಳೆ ಕೈಲಾಶ್ ಸಂಕಲಾ ಉಪ ಮೇಯರ್‌ ಆಯ್ಕೆಯಾದರು. ಎರಡೂ ಹುದ್ದೆಗಳಿಗೂ ಅವಿರೋಧವಾಗಿ ಆಯ್ಕೆ ನಡೆದಿದೆ.
ಸೆಹ್ರಾವತ್‌  ಎ. 23ರಂದು ನಡೆದ ಚುನಾವಣೆಯಲ್ಲಿ ದ್ವಾರಕಾ-ಬಿ ವಾರ್ಡ್‌‌ನಲ್ಲಿ ಆಪ್ ನ  ಸುಶ್ಮಾ ಬನ್ಸಾಲ್‌ ವಿರುದ್ಧ   9,866 ಮತಗಳ ಅಂತರದಿಂದ ಜಯ ಗಳಿಸಿದ್ದರು. ಸೆಹ್ರಾವತ್‌  14,613  ಮತ್ತು ಬನ್ಸಾಲ್‌ 4,747 ಮತಗಳನ್ನು ಪಡೆದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಸೆಹ್ರಾವತ್‌ ಅತ್ಯಂತ ಹೆಚ್ಚು  ಮತಗಳನ್ನು ಪಡೆದು ದಾಖಲೆ ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News