ಮದುವೆಗೆ ಕೆಲವೇ ಗಂಟೆಗಳ ಮುನ್ನ ಸಾವಿಗೆ ಶರಣಾದ ಇಂಜಿನಿಯರ್ ವರ

Update: 2017-05-19 10:53 GMT

ನಾಸಿಕ್,ಮೇ 19 : ತನ್ನ ಮದುವೆಗೆ ಇನ್ನೇನು ಕೆಲವೇ ಗಂಟೆಗಳಿವೆ ಎನ್ನುವಾಗ 26 ವರ್ಷದ ಯುವಕನೊಬ್ಬ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಘಟನೆ ಜಿಲ್ಲೆಯ ಪಿಂಪಲಗಾಂವ್ ವಾಖಾರಿ ಗ್ರಾಮದಿಂದ ಗುರುವಾರ ವರದಿಯಾಗಿದೆ.

ಆತ್ಮಹತ್ಯೆಗೈದವನನ್ನು ಪ್ರಶಾಂತ್ ನಾಮದೇವ್ ಖೈಮಾರ್ ಎಂದು ಗುರುತಿಸಲಾಗಿದೆ. ಆತ ನಾಶಿಕ್ ಮೂಲದ ಸಂಸ್ಥೆಯೊಂದರಲ್ಲಿ ಜೂನಿಯರ್ ಇಂಜಿನಿಯರ್ ಆಗಿದ್ದ.

ಆತ್ಮಹತ್ಯೆಗೆ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ. ಪೋಸ್ಟ್ ಮಾರ್ಟಂ ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.

ದೇವಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News