ಜೈಲಿನಲ್ಲಿ ಚೌಟಾಲ ಪಿಯುಸಿ ಪಾಸಾದ ಸುದ್ದಿ ಸುಳ್ಳು !?

Update: 2017-05-19 11:26 GMT

ಹೊಸದಿಲ್ಲಿ,ಮೇ 19: ಹರ್ಯಾಣದ ಮಾಜಿಮುಖ್ಯಮಂತ್ರಿ ಭಾರತ ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಓಂ ಪ್ರಕಾಶ್ ಚೌಟಾಲ ಜೈಲಲ್ಲೇ ಕುಳಿತು ಪ್ಲಸ್‌ಟು ಪರೀಕ್ಷೆ ಬರೆದು ಎಗ್ರೇಡ್‌ನಲ್ಲಿ ಪಾಸಾಗಿದ್ದಾರೆಂದು ಪ್ರಕಟವಾಗಿದ್ದ ಸುದ್ದಿ ಸರಿಯಲ್ಲ ಎಂದು ಅನ್‌ಲೈನ್ ಪೋರ್ಟಲ್ ಹಿಂದುಸ್ಥಾನ್ ಟೈಮ್ಸ್ ವರದಿಮಾಡಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಚೌಟಾಲ ಹನ್ನೆರಡನೆ ತರಗತಿಯಲ್ಲ, ಹತ್ತನೆ ತರಗತಿ ಪರೀಕ್ಷೆ ಬರೆದು ಫಲಿತಾಂಶವನ್ನು ಕಾಯುತ್ತಿದ್ದಾರೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿಮಾಡಿದೆ.

ಆದರೆ ಚೌಟಾಲ ಕಿರಿಯ ಮಗ ಹಾಗೂ ಶಾಸಕ ಅಭಯ್ ಚೌಟಾಲ ಕಳೆದ ದಿವಸ ತಂದೆ ಪಿಯುಸಿ ಪರೀಕ್ಷೆಯಲ್ಲಿ ಎಗ್ರೇಡ್‌ಪಡೆದು ಪಾಸಾಗಿದ್ದಾರೆಂದು ತಿಳಿಸಿದ್ದರು. ನ್ಯಾಶನಲ್ ಸ್ಕೂಲ್ ಆಫ್ ಓಪನ್ ಸ್ಕೂಲಿಂಗ್ ಜೈಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ತನ್ನ ತಂದೆ ಪರೀಕ್ಷೆ ಬರೆದಿದ್ದಾರೆ ಎಂದು ಅಭಯ್ ಚೌಟಾಲ ಹೇಳಿದ್ದರು. ಈಸುದ್ದಿಗೆ ಪತ್ರಿಕೆಗಳು ಪ್ರಾಮುಖ್ಯತೆ ನೀಡಿದ್ದು ಓಂಪ್ರಕಾಶ್ ಚೌಟಾಲ ಹನ್ನೆರಡನೆ ತರಗತಿ ಪರೀಕ್ಷೆಯಲ್ಲಿ ಎಗ್ರೇಡ್ ಪಡೆದು ಪಾಸಾಗಿದ್ದಾರೆ ಎಂದು ವರದಿ ಪ್ರಕಟಿಸಿದ್ದವು.

 ಅಧ್ಯಾಪಕ ನೇಮಕಾತಿ ಹಗರಣದಲ್ಲಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್ ಚೌಟಾಲ ಹತ್ತುವರ್ಷ ಜೈಲು ಶಿಕ್ಷೆಗೊಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News