×
Ad

ಮೇಲಧಿಕಾರಿಯಿಂದ ಕಿರುಕುಳ: ಆತ್ಮಹತ್ಯೆ ಟಿಪ್ಪಣಿಯಲ್ಲಿ ನೌಕಾಪಡೆ ಯೋಧನಿಂದ ಬಹಿರಂಗ

Update: 2017-05-20 20:29 IST

ಕೇರಳ, ಮೇ 20: ಇತ್ತೀಚೆಗೆ ಹೃದಯಸ್ತಂಭನದಿಂದ ಮೃತಪಟ್ಟ ಭಾರತೀಯ ನೌಕಾಪಡೆಯ ಯೋಧ ತನ್ನ ಆತ್ಮಹತ್ಯೆ ಟಿಪ್ಪಣಿಯಲ್ಲಿ, ಹಿರಿಯ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಹೊರಿಸಿರುವುದರಿಂದ ಪ್ರಕರಣ ವಿಚಿತ್ರ ತಿರುವು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ಕೆಡೆಟ್‌ಗಳ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಎಳಿಮಲೆಯಲ್ಲಿರುವ ಭಾರತೀಯ ನೌಕಾಪಡೆ ಅಕಾಡೆಮಿಯ ಗುಡ್ಡೆಪ್ಪ ಸೂರಜ್ (26) ಎಂಬ ಯೋಧ ಅಕ್ರಮ ಎಸಗಿದ ಬಗ್ಗೆ ವರದಿಯಾಗಿತ್ತು. ಇದಾದ ಒಂದು ಗಂಟೆಯಲ್ಲೇ ಅವರು ಪ್ರಜ್ಞೆ ಕಳೆದುಕೊಂಡಿದ್ದನ್ನು ತರಬೇತುದಾರರು ಪತ್ತೆ ಮಾಡಿದರು ಎಂದು ಅಧಿಕೃತ ಮೂಲಗಳು ಹೇಳಿವೆ. ತಕ್ಷಣ ಅವರನ್ನು ನೌಕಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮೂಲಗಳು ಹೇಳಿವೆ. ಮೃತ ಯೋಧನ ಹಿರಿಯ ಸಹೋದ್ಯೋಗಿಗಳು ಆತನಿಗೆ ಅಧ್ಯಯನಕ್ಕೆ ಅವಕಾಶ ನೀಡದೇ, ಪರೀಕ್ಷೆಯಲ್ಲಿ ಅಕ್ರಮ ಎಸಗಲು ಕಾರಣರಾದರು ಎಂದು ಸೂರಜ್ ಕುಟುಂಬದವರು ಆರೋಪಿಸಿದ್ದಾರೆ.

ಮಲಪ್ಪುರಂ ಮೂಲದ ಸೂರಜ್, 10ನೇ ವಯಸ್ಸಿನಲ್ಲೇ ನೌಕಾಪಡೆ ಸೇರಿದ್ದರು. ಬಳಿಕ ಅಧಿಕಾರಿ ತರಬೇತಿ ಪಡೆಯಲು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ಅಕಾಡೆಮಿಯಲ್ಲಿ ಪರೀಕ್ಷಾ ಅಕ್ರಮ ಎಸಗಿದ್ದಕ್ಕಾಗಿ ಅವರನ್ನು ವಜಾ ಮಾಡಲಾಗಿತ್ತು. ಇದನ್ನು ನೌಕಾಪಡೆ ನ್ಯಾಯಾಲಯದಲ್ಲಿ ಅವರು ಪ್ರಶ್ನಿಸಿದ್ದರು ಎಂದು ಕುಟುಂಬದ ಮೂಲಗಳು ಹೇಳಿವೆ. ನ್ಯಾಯಾಲಯದ ಆದೇಶದಂತೆ ಅವರನ್ನು ಮರು ನೇಮಕ ಮಾಡಲಾಗಿತ್ತು.

ಕರೆ ಮಾಡಿದಾಗಲೆಲ್ಲ ಆತ ಸಹೋದ್ಯೋಗಿಗಳು ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೂರಿದ್ದರು ಎಂದು ಗುಡ್ಡೆಪ್ಪ ಸೂರಜ್ ವಿವರಿಸಿದ್ದಾರೆ.

ಸೂರಜ್ ನಿಧನದ ಬಿಕ ಅಕಾಡೆಮಿ ಹೇಳಿಕೆ ಬಿಡುಗಡೆ ಮಾಡಿ, ಇದು ಆಕಸ್ಮಿಕ ಸಾವು ಎಂದು ಹೇಳಿತ್ತು. ಕಿರುಕುಳದ ಆರೋಪವನ್ನು ತಳ್ಳಿಹಾಕಲಾಗಿತ್ತು. ಜೊತೆಗೆ ಪರೀಕ್ಷಾ ಅಕ್ರಮದ ಆರೋಪವನ್ನು ದೃಢಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News