​ ಸಧ್ಯವೇ ಎಂಎಲ್ಎ ಆಗಲಿದ್ದಾರೆ 'ಬಿಗ್ ಬಾಸ್' ಪ್ರಥಮ್

Update: 2017-05-20 16:11 GMT

ಕಲರ್ಸ್ ಕನ್ನಡ ಚಾನೆಲ್ ನ 'ಬಿಗ್ ಬಾಸ್' ರಿಯಾಲಿಟಿ ಷೋ ಗೆದ್ದಿದ್ದೆ ತಡ ಪ್ರಥಮ್ ಗೆ ಆಫರ್ ಮೇಲೆ ಆಫರ್ಗಳು.

ಅನೇಕ ಚಿತ್ರಗಳಲ್ಲಿ ನಟಿಸುವ ಸೌಭಾಗ್ಯ ಅವರನ್ನು ಹುಡುಕುತ್ತಾ ಬಂದಿತು. ಆದರೆ ಕೆಲವು ದಿನಗಳ ಹಿಂದೆ ಆತ್ಮಹತ್ಯೆಯ ಹೈ ಡ್ರಾಮ ಮಾಡಿದ್ದರು ಎಂದು ಹಲವು ಆರೋಪಿಸಿದ್ದು, ಇದರಿಂದ ಭಾರೀ ಸುದ್ದಿಯಾಗಿದ್ದರು. ಹಲವರಿಂದ ಛೀಮಾರಿ ಹಾಕಿಸಿಕೊಂಡಿರುವುದೂ ಕಹಿ ಸತ್ಯ.

ಅಂದಿನಿಂದ ಮಾಧ್ಯಮಗಳಿಂದ ಹಾಗೂ ಸುದ್ದಿಯಿಂದ ದೂರ ಉಳಿದಿದ್ದ ಪ್ರಥಮ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. 
ತನಗೆ ಬೆಂಗಳೂರು ಬೇಡ, ಊರಿಗೆ ತೆರಳಿ ತೋಟ-ಕೃಷಿಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದ ಪ್ರಥಮ್ ಇದೀಗ ಚಿತ್ರವೊಂದರಲ್ಲಿ ನಟಿಸುವ ಸಂಬಂಧ ಬೆಂಗಳೂರಿಗೆ ಬಂದಿದ್ದಾರಂತೆ. 

ಅಂದ ಹಾಗೆ ಪ್ರಥಮ್‌ ಅವರು MLA ಎಂಬ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ. ಇಲ್ಲಿ ಎಂಎಲ್ಎ ಅಂದರೆ ಶಾಸಕ ಎಂದು ತಪ್ಪು ತಿಳ್ಕೊಬೇಡಿ.  ಇಲ್ಲಿ ಎಂಎಲ್ಎ ಅಂದರೆ 'ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ'. 

ಸದ್ಯ 'ದೇವರಂತಾ ಮನುಷ್ಯ' ಚಿತ್ರದ ಶೂಟಿಂಗ್ ನಲ್ಲಿ ಪ್ರಥಮ್ ಬ್ಯುಸಿಯಾಗಿದ್ದಾರೆ. ಇದರ ಶೂಟಿಂಗ್ ಮುಗಿದ ನಂತರ ಪಕ್ಕ ಕಾಮಿಡಿ ಚಿತ್ರ 'ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ' ಚಿತ್ರ ತೆರೆ ಕಾಣಲಿದೆಯಂತೆ. ಪ್ರಥಮ್ ಆಪ್ತರು ಹೇಳಿಕೊಳ್ಳುವಂತೆ ಮುಂದಿನ ತಿಂಗಳಾರಂಭದಲ್ಲಿ ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News