80 ವರ್ಷದ ಹಣ್ಣುಹಣ್ಣು ಮುದುಕಿಯಾಗಲಿದ್ದಾರೆ ಕ್ವೀನ್ ಕಂಗನಾ

Update: 2017-05-20 16:33 GMT

ವಯಸ್ಸು ಎಷ್ಟೇ ಇರಲಿ, ಮೇಕಪ್ ವಯಸ್ಸನ್ನು ಮರೆಮಾಚುತ್ತದೆ ಎನ್ನುವುದು ಸಿನಿಮಾ ಸತ್ಯ. ದಶಕಗಳ ಹಿಂದಿನ 'ಇಂಡಿಯನ್' ಚಿತ್ರ ಇರಬಹುದು, ಕನ್ನಡದ 'ಮೇಕಪ್' ಚಿತ್ರವೇ ಇರಬಹುದು. ಅಮಿತಾಬ್ ಸೇರಿದಂತೆ ಹಲವರ ಚಿತ್ರಗಳು ಮೇಕಪ್ ಕಮಾಲ್ ಗೆ ಸಾಕ್ಷಿಯಾಗಿವೆ. 

ಇದೀಗ ಕಂಗನಾ ಸರದಿ. ಬಾಲಿವುಡ್ ನ ಮೋಹಕ ಚೆಲುವೆ ಕಂಗನಾ ಯುವತಿಯಾಗಿದ್ದರೂ ಅವರ ವಯಸ್ಸು 80 ವರ್ಷ ಆಗಲಿದೆ ಎನ್ನುವುದೇ ಕುತೂಹಲದ ಸಂಗತಿ. 

ಬಾಲಿವುಡ್‌ ನಟಿ ಕಂಗನಾ ರನೋಟ್ 80 ವರ್ಷದ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ 'ರಾಬ್ತ' ಚಿತ್ರದಲ್ಲಿ ರಾಜ್ ಕುಮಾರ್ ರಾವ್ ಅವರು 324 ವರ್ಷ ಪ್ರಾಯದವರಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ ಎಂಬುದೇ ಅಚ್ಚರಿ ಎನಿಸಿತ್ತು. 

ಅಷ್ಟೇ ಅಲ್ಲ '102 ನಾಟ್ ಔಟ್' ಹಿಂದಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್ 102 ವರ್ಷದ ಅಜ್ಜನಾಗಿಯೂ, ರಿಷಿ ಕಪೂರ್ 75ರ ಮುದುಕನಾಗಿಯೂ ಮೇಕಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
ಅದರಂತೆ ಕಂಗನಾ  80ರ ಅಜ್ಜಿಯ ಸೋಗಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

'ಟೆಜು' ಚಿತ್ರದಲ್ಲಿ ಕಂಗನಾ ಹಣ್ಣುಹಣ್ಣು ಮುದುಕಿಯ ಪಾತ್ರ ಮಾಡಲಿದ್ದಾರೆ. ಈ ಚಿತ್ರಕ್ಕೆ ಕಂಗನಾ ಅವರೇ ನಿರ್ದೇಶಕಿ ಕೂಡಾ. 
ಈ ವರ್ಷದ ಅಂತ್ಯದಲ್ಲಿ ಶೂಟಿಂಗ್ ಆರಂಭಿಸಿ ಮುಂದಿನ ವರ್ಷದಲ್ಲಿ ತೆರೆಗೆ ತರುವ ಪ್ರಯತ್ನವಿದೆ ಎನ್ನುತ್ತಿದ್ದಾರೆ ಕಂಗನಾ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News