ಚೀನಾ: 20 ಸಿಐಎ ಏಜಂಟರ ಹತ್ಯೆ, ಜೈಲು

Update: 2017-05-21 15:52 GMT

ವಾಶಿಂಗ್ಟನ್, ಮೇ 21: ಚೀನಾವು 2010ರಿಂದ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಯ ಬೇಹುಗಾರಿಕಾ ಪ್ರಯತ್ನಗಳನ್ನು ಅತ್ಯಂತ ವ್ಯವಸ್ಥಿತವಾಗಿ ಹತ್ತಿಕ್ಕುತ್ತಿದೆ ಹಾಗೂ ಈ ಅವಧಿಯಲ್ಲಿ ಹತಕ್ಕೂ ಅಧಿಕ ಗುಪ್ತ ಮಾಹಿತಿದಾರರನ್ನು ಹತ್ಯೆಮಾಡಿದೆ ಅಥವಾ ಜೈಲಿಗಟ್ಟಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ರವಿವಾರ ವರದಿ ಮಾಡಿದೆ.

ಇದು ಚೀನಾದಲ್ಲಿನ ಅಮೆರಿಕದ ಬೇಹುಗಾರಿಕೆಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಪತ್ರಿಕೆ ಹೇಳಿದೆ.

 2010 ಮತ್ತು 2012ರ ನಡುವಿನ ಅವಧಿಯಲ್ಲಿ ಕನಿಷ್ಠ 12 ಸಿಐಎ ಮೂಲಗಳನ್ನು ಹತ್ಯೆಮಾಡಲಾಗಿದೆ. ಆ ಪೈಕಿ ಓರ್ವನನ್ನು ಆತನ ಸಹೋದ್ಯೋಗಿಗಳ ಮುಂದೆಯೇ ಗುಂಡು ಹಾರಿಸಿ ಕೊಲ್ಲಲಾಯಿತು. ಅದು ಬೇಹುಗಾರಿಕೆ ನಡೆಸುವವರಿಗೆ ನೀಡಿದ ಸ್ಪಷ್ಟ ಎಚ್ಚರಿಕೆಯಾಗಿತ್ತು ಎಂದು ಪತ್ರಿಕೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News