×
Ad

ಅಮೆರಿಕದ ಪರ್ವತಾರೋಹಿ ಎವರೆಸ್ಟ್‌ನಲ್ಲಿ ಸಾವು

Update: 2017-05-21 21:25 IST

ಕಠ್ಮಂಡು (ನೇಪಾಳ), ಮೇ 21: ಅಮೆರಿಕದ ಪರ್ವತಾರೋಹಿಯೊಬ್ಬರು ರವಿವಾರ ವೌಂಟ್ ಎವರೆಸ್ಟ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಜಗತ್ತಿನ ಅತ್ಯುನ್ನತ ಪರ್ವತ ಶಿಖರದಲ್ಲಿ ಈ ಋತುವಿನಲ್ಲಿ ಸಂಬಂಧಿಸಿದ ಮೂರನೆ ಸಾವಾಗಿದೆ.

ಅಮೆರಿಕದ ಅಲಬಾಮ ರಾಜ್ಯದ 50 ವರ್ಷದ ರೊಲ್ಯಾಂಡ್ ಯಿಯರ್‌ವುಡ್ 8,400 ಮೀಟರ್ ಎತ್ತರದಲ್ಲಿ ‘ಸಾವಿನ ವಲಯ’ ಎಂದು ಕರೆಯಲ್ಪಡುವ ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ ಎಂದು ಅವರ ಪ್ರಾಯೋಜಕತ್ವ ವಹಿಸಿರುವ ‘ಎವರೆಸ್ಟ್ ಪರಿವಾಸ್ ಟ್ರೆಕ್ಕಿಂಗ್ ಕಂಪೆನಿ’ಯ ಮುರಾರಿ ಶರ್ಮ ಹೇಳಿದರು.

ಈ ‘ಸಾವಿನ ವಲಯ’ದಲ್ಲಿ ವಾಯುವಿನ ಸಾಂದ್ರತೆ ಅತ್ಯಂತ ತೆಳುವಾಗಿದೆ.

ಎವರೆಸ್ಟ್ ಏರಿದ ಬಳಿಕ ಭಾರತೀಯ ನಾಪತ್ತೆ

ಭಾರತೀಯ ಪರ್ವತಾರೋಹಿಯೊಬ್ಬರು ವೌಂಟ್ ಎವರೆಸ್ಟ್‌ನ ತುದಿಯಿಂದ ಇಳಿದ ಬಳಿಕ ಶನಿವಾರ ಹಿಮಾಲಯ ಪರ್ವತದಲ್ಲಿ ನಾಪತ್ತೆಯಾಗಿದ್ದಾರೆ. ಉತ್ತರಪ್ರದೇಶದ ಮೊರದಾಬಾದ್ ನಿವಾಸಿ ರವಿ ಕುಮಾರ್ ಪರ್ವತದ ದಕ್ಷಿಣದ ಇಳಿಜಾರಿನಲ್ಲಿ ನಾಪತ್ತೆಯಾಗಿದ್ದಾರೆ.

ರವಿ ಕುಮಾರ್ ಶನಿವಾರ ಮಧ್ಯಾಹ್ನ ಎವರೆಸ್ಟನ್ನು ಏರಿದ್ದರು. ಬಳಿಕ ಅವರು ಓರ್ವ ಶೆರ್ಪಾ ಗೈಡ್ ಜೊತೆ ಇಳಿಯುತ್ತಿದ್ದಾಗ ಬಾಲ್ಕನಿ ಪ್ರದೇಶದ ಸಮೀಪ ನಾಪತ್ತೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News