ನೌಗಾಂವ್: ಮೂವರು ಯೋಧರು ಹುತಾತ್ಮ
Update: 2017-05-21 21:28 IST
ಶ್ರೀನಗರ, ಮೇ 21: ಉತ್ತರ ಕಾಶ್ಮೀರದ ನೌಗಾಂವ್ ಪ್ರದೇಶದ ಗಡಿರೇಖೆಯ ಬಳಿ ಶನಿವಾರ ಆರಂಭಗೊಂಡ ಎನ್‌ಕೌಂಟರ್‌ನಲ್ಲಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ ಮೂವರು ಯೋಧರೂ ಹುತಾತ್ಮರಾಗಿದ್ದಾರೆ.
ಶನಿವಾರ ಗಡಿದಾಟಿ ಒಳನುಸುಳುವ ಭಯೋತ್ಪಾದಕರ ಗುಂಪೊಂದರ ಯತ್ನವನ್ನು ಜಾಗೃತ ಯೋಧರು ವಿಫಲಗೊಳಿಸಿದಾಗ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು ಸೇನೆಯ ಯೋಧರು ಪ್ರತಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಗೈಯಲಾಗಿದೆ ಹಾಗೂ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಘಟನಾ ಸ್ಥಳದಿಂದ ನಾಲ್ಕು ಗನ್ ಹಾಗೂ ಇತರ ಶಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.