ರೇಪ್ ಕುಖ್ಯಾತಿ ಹರಿಸ್ವಾಮಿಯ ರಿಯಲ್ ಎಸ್ಟೇಟ್, ಬೇನಾಮಿ ವ್ಯವಹಾರ ತನಿಖೆ
ತಿರುವನಂತಪುರಂ,ಮೇ 22: ಅತ್ಯಾಚಾರಕ್ಕೆ ಯತ್ನಿಸಿ, ಹುಡುಗಿಯಿಂದ ಮರ್ಮಾಂಗವನ್ನು ಕತ್ತರಿಸಿಕೊಂಡ ಗಂಗೇಶಾನಂದ ತೀರ್ಥಪಾದ ಯಾನೆ ಹರಿಸ್ವಾಮಿಗೆ ಕೊಟ್ಯಂತರ ರೂಪಾಯಿ ರಿಯಲ್ ಎಸ್ಟೇಟ್ ವ್ಯವಹಾರ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪನ್ಮನ ಆಶ್ರಮದ ಮಠಾಧಿಪತಿ ಎನ್ನುವ ನಿಟ್ಟನಲ್ಲಿಸ್ವಾಮಿ ರಿಯಲ್ ಎಸ್ಟೇಟ್ ಮತ್ತು ಹೊಟೇಲ್ ವ್ಯವಹಾರ ನಡೆಸುತ್ತಿದ್ದರು.
ಕೊಲಂಚೇರಿಯ ಹೊಟೇಲ್ ವ್ಯವಹಾರ, ವಯನಾಡ್‌ನ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಸ್ವಾಮಿ ಪಾಲುದಾರರಾಗಿದ್ದು, ಈತನಿಂದ ಕಿರುಕುಳಕ್ಕೊಳಗಾದ ಯುವತಿಯ ತಂದೆ ತಾಯಿಯಿಂದ 40ಲಕ್ಷ ರೂಪಾಯಿ ಮತ್ತು ಕಾರನ್ನು ತೆಗೆದುಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹುಡುಗಿಯ ತಂದೆ ನಿವೃತ್ತ ಸರಕಾರಿ ಉದ್ಯೋಗಿಯಾಗಿದ್ದು, ನಿವೃತ್ತಿವೇಳೆ ಸಿಕ್ಕಿದ 30ಲಕ್ಷ ರೂಪಾಯಿ ಹಾಗೂ ಸೊಸೈಟಿಯಿಂದ ಹತ್ತುಲಕ್ಷ ಸಾಲ ತೆಗೆದು ವ್ಯಾಪಾರಕ್ಕೆಂದು ಸ್ವಾಮಿಗೆ ಕೊಟ್ಟಿದ್ದರು ಹುಡುಗಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ವಾಮಿಯ ವ್ಯವಹಾರಗಳಲ್ಲಿ ಪಾಲುದಾರನಾಗಿ ಮಾಡುವ ಭರವಸೆಕೊಟ್ಟು ಹಣ ಮತ್ತು ಕಾರನ್ನು ಸ್ವಾಮಿ ಲಪಟಾಯಿಸಿದ್ದಾರೆ. ಈ ನಡುವೆ ಹುಡುಗಿಯ ತಂದೆಗೆ ಹೃದಯಾಘಾತವಾಗಿತ್ತು. ಆದ್ದರಿಂದ ಅತ್ತಿತ್ತ ಹೋಗಲು ಕಾರು ಖರೀದಿಸಲಾಯಿತು. ಆದರೆ ವ್ಯವಹಾರಕ್ಕೆ ಅಗತ್ಯವಿದೆಎಂದು ಕಾರನ್ನು ಕೂಡಾ ಸ್ವಾಮಿ ಕೊಂಡು ಹೋಗಿದ್ದಾರೆ. ಆದರೆ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಷಯ ತನಗೆಗೊತ್ತಿಲ್ಲ ಎಂದು ಹುಡುಗಿಯ ತಾಯಿ ಹೇಳಿದ್ದಾರೆ.
ವಯನಾಡ್ ರಿಯಲ್ ಎಸ್ಟೇಟ್‌ನಲ್ಲಿ ಪಾಲುದಾರರಾಗಿ ಮಾಡುತ್ತೇವೆಂದು ಹೇಳಿ ಈತ ಹಲವರಿಂದ ಹಣವನ್ನು ಪೀಕಿಸಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಯಾರು ಕೂಡಾ ದೂರು ನೀಡಿಲ್ಲ.
ತನಗೆ ಹದಿನೇಳು ವರ್ಷ ಆಗಿದ್ದಾಗ ಲೈಂಗಿಕ ಕಿರುಕುಳ ನೀಡತೊಡಗಿದ್ದ ಸ್ವಾಮಿ ಕಳೆದ ಒಂದೂವರೆ ವರ್ಷಗಳಿಂದ ದೂರವಿದ್ದ. ಇದಕ್ಕೆ ತಂದೆತಾಯಿ ಮತ್ತು ಸ್ವಾಮಿಯ ಆರ್ಥಿಕ ವಹಿವಾಟು ಕಾರಣವಾಗಿತ್ತು. ಒಂದೂವರೆ ವರ್ಷದ ಕೋಪ ರಾಜಿಯಾಗಬೇಕು. ಅದಕ್ಕೆ ಸಹಕರಿಸಬೇಕೆಂದು ಹೇಳಿ ಕಳೆದ ಶುಕ್ರವಾರ ರಾತ್ರಿ ಸ್ವಾಮಿ ತನ್ನನ್ನು ಸಮೀಪಿಸಿದ್ದ ಎಂದು ಹುಡುಗಿ ಪೊಲೀಸರಿಗೆ ತಿಳಿಸಿದ್ದಾಳೆ. ಅದೇ ಸಂದರ್ಭದಲ್ಲಿ ಸ್ವಾಮಿಯ ಮರ್ಮಾಂಗವನ್ನು ಕತ್ತರಿಸಿ ಅವಳು ಪೊಲೀಸರ ಮೊರೆಹೋಗಿದ್ದಳು.