ಬಾಹುಬಲಿ 2-ದಂಗಲ್ ನಡುವೆ ಬಿರುಸಿನ ಸ್ಪರ್ಧೆ

Update: 2017-05-22 11:11 GMT

ಹೊಸದಿಲ್ಲಿ, ಮೇ 22: ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರ ಸಿನೆಮಾ ಜಗತ್ತಿನಲ್ಲೇ ಅಚ್ಚರಿಯ ದಾಖಲೆ ನಿರ್ಮಿಸಿ, ಬಾಕ್ಸ್ ಆಫೀಸನ್ನು ಕೊಳ್ಳೆಹೊಡೆದು 1,500 ಕೋಟಿ ರೂ.ಗೂ ಹೆಚ್ಚು ಹಣ ಗಳಿಸಿದೆ. ಆದರೆ ಕೆಲ ತಿಂಗಳುಗಳ ಮೊದಲು ಬಿಡುಗಡೆಯಾಗಿದ್ದ ದಂಗಲ್ ಮತ್ತೊಮ್ಮೆ ತನ್ನ ಹವಾ ಮುಂದುವರಿಸಿದ್ದು, ಬಾಹುಬಲಿಗೇ ಪೈಪೋಟಿ ನೀಡುತ್ತಿದೆ.

ಡಿಸೆಂಬರ್ 23ರಂದು ಬಿಡುಗಡೆಯಾಗಿದ್ದ 'ದಂಗಲ್' ಆಗಿನ್ನೂ 900 ಕೋಟಿ ರೂ. ಸಂಪಾದಿಸಿದೆ ಎನ್ನುವಷ್ಟರಲ್ಲೇ, 'ಬಾಹುಬಲಿ-2' ಚಿತ್ರ ತೆರೆಕಂಡು 2 ವಾರಗಳಲ್ಲೇ 1,000 ಕೋಟಿ ಆದಾಯ ಪೇರಿಸಿ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆಯಿತು. ಇನ್ನೇನು "ದಂಗಲ್" ಪರಾಕ್ರಮ ಮುಗಿಯಿತು ಎನ್ನುವಷ್ಟರಲ್ಲಿ ಚೀನಾದಲ್ಲಿ ತೆರೆಕಂಡ ದಂಗಲ್ ಮತ್ತೊಮ್ಮೆ ಬಾಹುಬಲಿ 2ಗೆ ಪೈಪೋಟಿ ನೀಡುತ್ತಿದೆ.

ಈ ಮಧ್ಯೆ ಆದಾಯ ಗಳಿಕೆಯನ್ನು ತುಲನೆ ಮಾಡಿದರೆ ಅಚ್ಚರಿಯ ಅಂಕಿ ಅಂಶವೂ ಸಿಗುತ್ತಿದೆ. 'ಬಾಹುಬಲಿ-2'  ಈವರೆಗೆ ಸುಮಾರು 1,540 ಕೋಟಿ ರೂ. ಆದಾಯ ಗಳಿಸಿದರೆ, 'ದಂಗಲ್' ಚಿತ್ರ ಬಾಹುಬಲಿಗೆ ಹತ್ತಿರ ಎಂಬಂತೆ 1,501 ಕೋಟಿ ರೂ. ಗಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News