"ಕೌನ್ ಬನೇಗಾ ಕೆಬಿಸಿ ಕಾ ಆಂಕರ್?": ಈ ಇಬ್ಬರು ಖ್ಯಾತ ನಟಿಯರಲ್ಲಿ ಒಬ್ಬರಿಗೆ ಸಿಗಲಿದೆ ಅವಕಾಶ!

Update: 2017-05-22 13:22 GMT

ಹೊಸದಿಲ್ಲಿ, ಮೇ 22: ಭಾರತೀಯ ಚಿತ್ರರಂಗದ ದಿಗ್ಗಜ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ರ ನಟನೆಯಷ್ಟೇ ಅವರ ಆ್ಯಂಕರಿಂಗ್ ಶೈಲಿಯನ್ನೂ ಜನರು ಇಷ್ಟಪಡುತ್ತಾರೆ. ಪ್ರಸಿದ್ಧ ರಿಯಾಲಿಟಿ ಶೋ "ಕೌನ್ ಬನೇಗಾ ಕರೋಡ್ ಪತಿ" ಕಾರ್ಯಕ್ರಮವನ್ನು ನಡೆಸಿಕೊಟ್ಟ ಮೇಲಂತೂ ಬಚ್ಚನ್ ಅವರ ವಾಕ್ಚಾತುರ್ಯ, ಆ್ಯಂಕರಿಂಗ್ ಶೈಲಿ ಮತ್ತಷ್ಟು ಪ್ರಸಿದ್ಧವಾಯಿತು. ಸುಮಾರು ಒಂದೂವರೆ ದಶಕಗಳಿಗೂ ಹೆಚ್ಚಿನ ಕಾಲ ‘ಕೌನ್ ಬನೇಗಾ ಕರೋಡ್ ಪತಿ’ ಶೋ ನಡೆಸಿಕೊಟ್ಟ ಬಿಗ್ ಬಿ ಸ್ಥಾನಕ್ಕೆ ಬಚ್ಚನ್ ಸೊಸೆ, ವಿಶ್ವಸುಂದರಿ ಐಶ್ವರ್ಯ ರೈ ಬರಲಿದ್ದಾರಂತೆ.

‘ಕೌನ್ ಬನೇಗಾ ಕರೋಡ್ ಪತಿ’ ಶೋನಿಂದ ಅಮಿತಾಬ್ ಹಿಂದೆ ಸರಿಯಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆಯಿಂದಲೇ ಕೇಳಿಬರುತ್ತಿತ್ತು. ಅಮಿತಾಬ್ ಸ್ಥಾನದಲ್ಲಿ ಕುಳಿತು ಆ ಶೋವನ್ನು ಐಶ್ವರ್ಯ ಮುಂದುವರೆಸಬಹುದು ಎಂಬ ಸುದ್ದಿ ಕೂಡ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಖಾತ್ರಿ ಇರಲಿಲ್ಲ. ಇದೀಗ ಆ ಕುರಿತಂತೆ ಸ್ಪಷ್ಟನೆಯೊಂದು ಹೊರಬಿದ್ದಿದ್ದು, ಅಮಿತಾಬ್ ಸೊಸೆ ಐಶ್ವರ್ಯ ರೈ ಬಚ್ಚನ್ ಇನ್ನೂ ಮುಂದೆ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಐಶ್ವರ್ಯ ರೈ ಒಪ್ಪಿಲ್ಲವೆಂದಾದರೆ ಮಾಧುರಿ ದೀಕ್ಷಿತ್ ಗೆ ಈ ಅವಕಾಶ ಸಿಗಲಿರುವ ಸಾಧ್ಯತೆಗಳಿವೆ.

2000ದಲ್ಲಿ ಆರಂಭವಾದ ಈ ಶೋ ವನ್ನು ಅಮೀತಾಬಚ್ಚನ್ ಸಮರ್ಥವಾಗಿ ನಿಭಾಯಿಸಿದ್ದರು. 2007ರ ಹೊತ್ತಿಗೆ ಸೀಸನ್-3ನ್ನು ಶಾರೂಖ್ ಖಾನ್ ನಡೆಸಿಕೊಟ್ಟಿದ್ದರೂ, ಮತ್ತೆ ಅಮಿತಾಬ್ ಬಚ್ಚನ್ ಕೆಬಿಸಿಗೆ ಹತ್ತಿರವಾದರು. ಇದೀಗ ‘ಕೌನ್ ಬನೇಗಾ ಕರೋಡ್ ಪತಿ’ ಸದ್ಯವೇ 9ನೇ ಆವೃತ್ತಿಯನ್ನು ಆರಂಭಿಸಲಿದೆ. ಈ ಆವೃತ್ತಿಯನ್ನು ಐಶ್ವರ್ಯ ರೈ ನಡೆಸಿಕೊಡುವ ಸಾಧ್ಯತೆಗಳೇ ಹೆಚ್ಚು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News