ರಜಿನಿ-ಧನುಷ್ ಕಾಂಬಿನೇಷನ್ ಮೇನಿಯಾ ಶುರು: "ಕಾಲ"ನಾಗಿ ಮಿಂಚಲಿದ್ದಾರೆ ಸ್ಟೈಲ್ ಕಿಂಗ್

Update: 2017-05-25 15:34 GMT

ಚೆನ್ನೈ, ಮೇ 25: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಮುಂದಿನ ಸಿನೆಮಾದ ಬಗ್ಗೆ ಅಭಿಮಾನಿಗಳಲ್ಲಿದ್ದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. "2.0" ಚಿತ್ರದ ನಂತರ ಸೂಪರ್ ಸ್ಟಾರ್ ಅಭಿನಯದ ಮೆಗಾ ಬಜೆಟ್ ನ ಚಿತ್ರಕ್ಕೆ "ಕಬಾಲಿ" ನಿರ್ದೇಶಕ ಪಾ ರಂಜಿತ್ ಆ್ಯಕ್ಷನ್-ಕಟ್ ಹೇಳಲಿದ್ದು, ಅಳಿಯ ಧನುಷ್ ನಿರ್ಮಾಣ ಮಾಡಲಿದ್ದಾರೆ.

ಸ್ಟೈಲ್ ಕಿಂಗ್ ರಜಿನಿಕಾಂತ್ ಅಭಿನಯದ "ಎಂದಿರನ್" ಚಿತ್ರದ ಸೀಕ್ವೆಲ್ "2.0" ಸದ್ಯದಲ್ಲೇ ತೆರೆಕಾಣಲಿದ್ದು, ಈ ನಡುವೆ ರಜಿನಿ-ಪಾ ರಂಜಿತ್ ಕಾಂಬಿನೇಶನ್ ನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿರುವುದರಿಂದ ಅಭಿಮಾನಿಗಳು ಪುಳಕಿತರಾಗಿದ್ದಾರೆ. ಈ ಚಿತ್ರಕ್ಕೆ "ಕಾಲ" ಎಂದು ಹೆಸರಿಡಲಾಗಿದ್ದು, ರಜಿನಿ ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ.

ಧನುಷ್ ಹೋಮ್ ಬ್ಯಾನರ್ "ವಂಡರ್ ಬಾರ್ ಫಿಲ್ಮ್ಸ್"ನಡಿಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ಹುಮಾ ಖುರೇಷಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಜಿನಿ-ಧನುಷ್-ಪಾ ರಂಜಿತ್ ಕಾಂಬಿನೇಷನ್ ನ ಈ ಚಿತ್ರ ಸಿನೆಮಾ ರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News