‘ಟ್ಯೂಬ್ ಲೈಟ್’ ಟ್ರೇಲರ್ ಒಂದೇ ದಿನ 50 ಲಕ್ಷ ಜನ ವೀಕ್ಷಣೆ

Update: 2017-05-26 06:24 GMT

ಭಾರತೀಯ ಚಿತ್ರರಂಗದಲ್ಲಿ ‘ಬಾಹುಬಲಿ-2’ ಒಂದು ದಂತಕತೆಯಾಗಿ ಗುರುತಾಗಿದೆ. ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್ ಲೈಟ್’ ಕೂಡಾ ಬಾಹುಬಲಿ ಹಾದಿಯಲ್ಲಿ ಸಾಗಿ ದಾಖಲೆ ಬರೆಯಲಿದೆ ಎಂಬುದು ಬಾಲಿವುಡ್ ಗಣ್ಯರ ವಿಶ್ಲೇಷಣೆ. ಈ ಕುರಿತಂತೆ ಚರ್ಚೆ, ಸಮಾಲೋಚನೆ ಸಾಗಿರುವಂತೆಯೇ ‘ಟ್ಯೂಬ್ ಲೈಟ್’ ಟ್ರೇಲರ್ ಬಿಡುಗಡೆಯಾಗಿದೆ. 

 ‘ಟ್ಯೂಬ್ ಲೈಟ್’ ಚಿತ್ರ ಸೈನಿಕರ ಬದುಕಿನತ್ತ ಬೆಳಕು ಚೆಲ್ಲುವ ಚಿತ್ರ. ಇದು ಇಬ್ಬರು ಸಹೋದರರ ಕಥೆಯನ್ನು ಹೊಂದಿದ್ದು, ಸಲ್ಮಾನ್ ಖಾನ್ ಜೊತೆಗೆ ಅವರ ಸಹೋದರ ಸೊಹೈಲ್‌ ಖಾನ್‌ ಕೂಡಾ ನಟಿಸಿದ್ದಾರೆ. ಇಂಡೋ-ಚೈನಾ ಯುದ್ಧದ ಕಥಾನಕದಲ್ಲಿ ಸಲ್ಮಾನ್‌ ಬುದ್ಧಿಮಾಂಧ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ಚಿತ್ರ ಇನ್ನೂ ಹಲವು ವೈಶಿಷ್ಯಗಳನ್ನು ಹೊಂದಿದೆಯಂತೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದರೆ, ಶಾರೂಖ್ ಖಾನ್ ಅವರ ಧ್ವನಿ ಪ್ರತಿಧ್ವನಿಸಿದೆ. ಈ ಇಬ್ಬರು ಖಾನ್ ದ್ವಯರ ಸಹಭಾಗಿತ್ವ ಹಿಂದಿ ಚಿತ್ರರಂಗದಲ್ಲಿ ಹೊಸ ಪ್ರಯೋಗ ಎನ್ನುತ್ತಿದ್ದಾರೆ ‘ಟ್ಯೂಬ್ ಲೈಟ್’ ನಿರ್ದೇಶಕ ಕಬೀರ್. 

ಕಬೀರ್ ಖಾನ್ ನಿರ್ದೇಶನದ ಈ ಚಿತ್ರ ಇದೀಗ ನೂರಾರು ಕೋಟಿ ರೂಪಾಯಿಗಳಿಗೆ ವಿತರಣಾ ಹಕ್ಕನ್ನು ಮಾರಾಟ ಮಾಡಿದೆ. ಒಂದು ಮೂಲಗಳ ಪ್ರಕಾರ ಎನ್.ಎಚ್. ಸ್ಟುಡಿಯೋ 100 ಕೋಟಿ ರೂಪಾಯಿಗೆ ವಿತರಣಾ ಹಕ್ಕನ್ನು ಖರೀದಿಸಿದೆ. ಅಷ್ಟೇ ಅಲ್ಲ ಪ್ರಸಾರದ ಹಕ್ಕು ಸೇರಿದಂತೆ ವಿವಿಧ ಮೂಲಗಳಿಂದಲೂ ಈಗಾಗಲೇ ನೂರಾರು ಕೋಟಿ ರೂಪಾಯಿಗಳ ಆಧಾಯ ಪೇರಿಸಿರುವ ‘ಟ್ಯೂಬ್ ಲೈಟ್’ಗೆ ಮುಂದಿನ ದಿನಗಳಲ್ಲಿ ಇದರ ದುಪ್ಪಟ್ಟು ಆದಾಯ ಗಳಿಸುವುದು ಕಷ್ಠ ಸಾಧ್ಯವಲ್ಲ. 

‘ಟ್ಯೂಬ್ ಲೈಟ್’ ಚಿತ್ರ ಬಿಡುಗಡೆಗೆ ಇನ್ನೂ ಹಲವು ದಿನಗಳೇ ಇದ್ದು ಅಷ್ಟೊತ್ತಿಗೆ ಅನೇಕಾನೇಕ ಡೀಲ್ ಗಳು ಪೂರ್ಣಗೊಳ್ಳಲಿದೆ. ಒಂದು ಅಂಕಿ-ಅಂಶಗಳ ಪ್ರಕಾರ ‘ಟ್ಯೂಬ್ ಲೈಟ್’ ಚಿತ್ರ ಬಿಡುಗಡೆಗೆ ಮುನ್ನವೇ 500 ಕೋಟಿ ರೂಪಾಯಿಗಳ ಆದಾಯ ಪೇರಿಸುವ ನಿರೀಕ್ಷೆ ವ್ಯಕ್ತವಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News