×
Ad

ಪ್ರತಿದಿನ 300 ಮಂದಿಗೆ ಉಚಿತ ಊಟ ಕೊಡುವ ಚಾಯ್ ವಾಲಾ ಮಕ್ಬೂಲ್ ಅಹ್ಮದ್

Update: 2017-05-26 14:55 IST

ಭೋಪಾಲ್,ಮೇ 26 : ಮಧ್ಯ ಪ್ರದೇಶದ ಭೋಪಾಲ್ ನಗರದಲ್ಲಿನ ವ್ಯಕ್ತಿಯೊಬ್ಬರು ಕಳೆದ ನಾಲ್ಕು ವರ್ಷಗಳಿಂದ ಪ್ರತಿ ದಿನ ಸುಮಾರು 300 ಮಂದಿಗೆ ಉಚಿತ ಊಟ ಕೊಡುತ್ತಿದ್ದಾರೆ. ಈ ಸೇವಾ ಕೈಂಕರ್ಯಕ್ಕೆ ಅವರಿಗೆ ಬಹಳಷ್ಟು ದೇಣಿಗೆಗಳೂ ದೊರೆಯುತ್ತವೆ. ಅವರಲ್ಲಿಗೆ ಬಂದವರು ಯಾರೂ ಖಾಲಿ ಹೊಟ್ಟೆಯಲ್ಲಿ ಹಿಂದಿರುಗಿ ಹೋಗುವುದಿಲ್ಲ. ಅವರ ಹೆಸರು ಮಕ್ಬೂಲ್ ಅಹ್ಮದ್. ಚಹಾ ಅಂಗಡಿಯೊಂದನ್ನು ನಡೆಸುವ ಅವರು ಮೊದಲ ಬಾರಿ ಬಡವರಿಗೆ ಉಚಿತ ಊಟ ನೀಡಲು ಆರಂಭಿಸಿದ್ದು ಮೇ 1, 2013ರಂದು. ಆಗ ಅವರು ತಮಗೆ ಚಹಾ ಅಂಗಡಿಯಿಂದ ದೊರೆತ ಆದಾಯದಿಂದ ಉಚಿತ ಊಟ ಒದಗಿಸುತ್ತಿದ್ದರು. ಆದರೆ ಅಲ್ಲಾಹನ ಕೃಪೆಯಿಂದ ಇದೀಗ ಅವರ ಅಂಗಡಿಗೆ ಸಾವಿರಾರು ಮಂದಿ ಬಂದರೂ ಯಾರೂ ನಿರಾಶರಾಗುವುದಿಲ್ಲ. ಇಂದು ಅವರ ಈ ಸೇವಾ ಕೈಂಕರ್ಯಕ್ಕೆ ಹಲವರು ಕೈಜೋಡಿಸಿರುವುದರಿಂದ ಮಕ್ಬೂಲ್ ಅವರ ಕಾರ್ಯ ಸುಲಭವಾಗಿ ಬಿಟ್ಟಿದೆ.

ಅವರ ಈ ವಿಭಿನ್ನ ಅಡುಗೆ ಮನೆಯ ಹೆಸರು ‘ಲಂಗರ್-ಎ-ಆಮ್.’ ಸುತ್ತಮುತ್ತಲಿನ ಬಡವರು, ಭಿಕ್ಷುಕರು ಹಾಗೂ ಕೆಲಸ ದೊರೆಯದೆ ಉಣ್ಣಲು ಗತಿಯಿಲ್ಲದವರು ಇಲ್ಲಿಗೆ ಬಂದು ಉಚಿತ ಊಟ ಮಾಡುತ್ತಾರೆ ಮತ್ತು ಮಕ್ಬೂಲ್ ಅವರನ್ನು ಮನಃಪೂರ್ವಕವಾಗಿ ಆಶೀರ್ವದಿಸುತ್ತಾರೆ. ಮಕ್ಬೂಲ್ ಅವರ ಆರ್ಥಿಕ ಸ್ಥಿತಿ ಅಷ್ಟೊಂದೇನೂ ಚೆನ್ನಾಗಿಲ್ಲದಿದ್ದರೂ ಬಡವರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಅವರಿಗಿರುವ ದೃಢಚಿತ್ತತೆಯಿಂದ ಇದು ಸಾಧ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News