ಪಂಜಾಬ್ ನ ಸೂಪರ್ ಕಾಪ್ ನಿವೃತ್ತ ಡಿಜಿಪಿ ಕೆಪಿಎಸ್ ಗಿಲ್ ನಿಧನ
Update: 2017-05-26 16:41 IST
ಚಂಡಿಗಢ, ಮೇ 26: ಪಂಜಾಬ್ ನ ನಿವೃತ್ತ ಡಿಜಿಪಿ ಹಾಗೂ ಇಂಡಿಯನ್ ಹಾಕಿ ಫೆಡರೇಶನ್(ಐಎಚ್‌ಎಫ್ ) ಅಧ್ಯಕ್ಷ ಕೆ.ಪಿ.ಎಸ್ ಗಿಲ್ ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ನಿಧನರಾದರು.
82ರ ಹರೆಯದ ಗಿಲ್ ಅನಾರೋಗ್ಯದಿಂದ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಕೊನೆಯುಸಿರೆಳೆದರು.
ಪಂಜಾಬ್ ನ ಸಿಂಹ ಎಂದೇ ಹೆಸರಾಗಿದ್ದ ಗಿಲ್ 1988 ರಿಂದ 1990 ಮತ್ತು 1991 ರಿಂದ 1995ರ ತನಕ ಎರಡು ಬಾರಿ ಪಂಜಾಬ್ ನಲ್ಲಿ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 1995ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.