103 ವರ್ಷದ ಅಭಿಮಾನಿಯನ್ನು ಭೇಟಿಯಾದ ಅಮಿತಾಭ್

Update: 2017-05-26 11:18 GMT

ಹೊಸದಿಲ್ಲಿ,ಮೇ26: ಬಾಲಿವುಡ್ ಮೆಘಾ ಸ್ಟಾರ್ ಅಮಿತಾಭ್ ಬಚ್ಚನ್ ತನ್ನ ಅಧಿಕೃತ ಬ್ಲಾಗ್‌ನಲ್ಲಿ ಕೆಲವು ವರ್ಷಗಳಿಂದೀಚೆಗೆ ಅಭಿಮಾನಿಗಳಿಗೆ ತನ್ನ ದಿನಚರಿಯನ್ನು ತಿಳಿಸುತ್ತಾ ಬಂದಿದ್ದಾರೆ. ಅವರು ದಿನವಿಡೀ ಶೂಟಿಂಗ್‌ನಲ್ಲಿ ನಿರತನಾಗಿರುವುದು. ಯಾರನ್ನು ಭೇಟಿಯಾಗಿದ್ದು,ಅವರ ಚಿತ್ರಗಳು, ಇವೆಂಟ್ ಹಾಗೂ ಪಾರ್ಟಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿರುತ್ತಾರೆ.

ಇತ್ತೀಚೆಗೆ ಅಮಿತಾಭ್ ಓರ್ವ ವಿಶೇಷ ಅಭಿಮಾನಿ ಸಿಕ್ಕಿರುವುದನ್ನು ತಿಳಿಸಿದ್ದಾರೆ. ತನ್ನ ಬ್ಲಾಗ್‌ನಲ್ಲಿ ಬಿಗ್‌ಬಿ 103ವರ್ಷದ ಅಭಿಮಾನಿ ಕ್ರಿಸ್ಟೀನಾ ಕರ್ವಲೊರನ್ನು ಭೇಟಿಯಾದೆ ಎಂದು ಬರೆದುಕೊಂಡಿದ್ದರು. ಕ್ರಿಸ್ಟಿನಾರಿಗೆ ಯಾವಾಗಲು ಅಮಿತಾಭ್‌ರನ್ನು ಭೇಟಿಯಾಗುವ ಆಸೆ ಇತ್ತು. ಆ ಆಸೆಯನ್ನು ಈಗ ಅಮಿತಾಭ್ ಈಡೇರಿಸಿದ್ದಾರೆ.

ಬಿಗ್‌ಬಿ ಬ್ಲಾಗ್‌ನಲ್ಲಿ ಹಿರಿಯ ಮಹಿಳೆ ಕ್ರಿಸ್ಟಿನಾರನ್ನು ಭೇಟಿಯಾದ ಕುರಿತು ಹೀಗೆ ಬರೆದಿದ್ದಾರೆ" ಕ್ರಿಸ್ಟಿನಾರೊಂದಿಗೆ ಭೇಟಿಯಾದೆ. ಅವರಿಗೆ 103 ವರ್ಷ..103 ವರ್ಷ!!. ಅವರು ನನ್ನ ಸಿನೆಮಾ ನೋಡುತ್ತಾರೆ. ಹಲವು ಸಲ ನನ್ನನ್ನು ಭೇಟಿಯಾಗಬೇಕೆಂದು ಬಯಸುತ್ತಿದ್ದರು. ನನ್ನ ಹಣೆಗೆ ಅವರು ಆಶೀರ್ವದಿಸಿದ್ದಾರೆ.ಪ್ರತಿದಿನಾಲೂ ಟಿವಿ ನೋಡುತ್ತಾರೆ. ಡಬ್ಲೂ ಡಬ್ಲೂ ಇ ಅವರ ಫೇವರಿಟ್ ಆಗಿದೆ.ಅವರೇ ಎಲ್ಲ ಕೆಲಸ ಮಾಡಿಕೊಳ್ಳುತ್ತಾರೆ. ಸ್ವಯಂ ಸ್ನಾನ ಮಾಡುತ್ತಾರೆ. ಬಟ್ಟೆ ತೊಳೆಯುತ್ತಾರೆ. ಇದನ್ನೆಲ್ಲ ನಂಬುವುದೇ ಬಹಳ ಕಷ್ಟವಿದೆ"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News