×
Ad

ಕಾರುಕಳ್ಳತನ ವಿಫಲಗೊಳಿಸಿದ ಧೀರ ಮಹಿಳೆ: ವೀಡಿಯೊ ವೈರಲ್

Update: 2017-05-26 16:53 IST

ಹೊಸದಿಲ್ಲಿ,ಮೇ 26: ಕಾರುಕಳ್ಳತನ ಘಟನೆ ಭಾರತದಲ್ಲಿ ಸಾಮಾನ್ಯವಾಗಿದೆ.ಆದರೆ ಅಮೆರಿಕದಲ್ಲಿಕೂಡಾ ಕಾರು ಕಳ್ಳತನವಾಗುತ್ತಿರುವುದಕ್ಕೆ ಲೆಕ್ಕವಿಲ್ಲ. ಅಮೆರಿಕದ ಮಿಲ್ವಾಕಿ ನಗರದಲ್ಲಿ ಕಾರುಕಳ್ಳರನ್ನೇ ಸೋಲಿಸಿದ ಮಹಿಳೆಯ ಸಾಹಸದ ಕುರಿತ ವೀಡಿಯೊ ವೈರಲ್ ಆಗಿದೆ.

ಮಹಿಳೆ ಕಾರುಕಳ್ಳರಿಂದ ತನ್ನ ಕಾರನ್ನು ಸಾಹಸಿಕವಾಗಿ ಉಳಿಸಿಕೊಂಡಿದ್ದಾರೆ. ಮಹಿಳೆ ಇಂಧನ ತುಂಬಿಸಲು ಗ್ಯಾಸ್ ಸ್ಟೇಶನ್‌ ನ ಮುಂದೆ ತನ್ನ ಕಾರನ್ನು ನಿಲ್ಲಿಸಿದ್ದರು. ಕಾರಿನಿಂದ ಕೆಳಗಿಳಿದು ಇಂಧನದ ಪೈಪ್ ಇರುವಲ್ಲಿಗೆ ಹೋಗುತ್ತಿದ್ದಂತೆಕಪ್ಪುಬಣ್ಣದ ಕಾರು ಮಹಿಳೆಯ ಕಾರಿನಮುಂದೆ ಬಂದು ನಿಂತುಕೊಳ್ಳುತ್ತದೆ.

ಅದರಿಂದ ಇಳಿದ ಒಬ್ಬ ವ್ಯಕ್ತಿ ಮಹಿಳೆಯ ಕಾರಿನ ಒಳಗೆ ಹೋಗಿ ಕಾರನ್ನು ಚಾಲೂ ಮಾಡಿ ಅಪಹರಿಸಲು ಪ್ರಯತ್ನಿಸಿದ್ದನ್ನು ಅಷ್ಟರಲ್ಲಿ ಮಹಿಳೆ ನೋಡುತ್ತಾರೆ. ಕೂಡಲೇ ಸಕ್ರಿಯರಾದ ಅವರು ತನ್ನ ಸಹಾಯಕ್ಕೆ ಬೊಬ್ಬೆ ಹಾಕಿದ್ದಲ್ಲದೆ, ಕಾರಿನ ಬಾನೆಟ್ ಮೇಲೆ ಹತ್ತಿ ಕುಳಿತುಕೊಳ್ಳುತ್ತಾರೆ. ನಂತರ ಕಾರು ಚಲಾಯಿಸಿಕೊಂಡು ಮುಂದೆ ಹೋಗದಂತೆ ಕಾರಿನ ಕನ್ನಡಿಗೆ ಅಡ್ಡಲಾಗಿ ಮಲಗುತ್ತಾರೆ.

ಸಹಾಯಕ್ಕೆ ಮೊರೆ ಇಡುತ್ತಿರುತ್ತಾರೆ. ಅಷ್ಟಾದಾಗ ಧೈರ್ಯಗುಂದಿದ ಕಳ್ಳ ಕಾರನ್ನು ಬಿಟ್ಟು ತಾನು ಬಂದ ಕಪ್ಪು ಕಾರಿನಲ್ಲಿ ಪರಾರಿಯಾಗುತ್ತಾನೆ. ಅಷ್ಟರಲ್ಲಿ ಮಹಿಳೆಯ ಬೊಬ್ಬೆ ಕೇಳಿ ಸಹಾಯಕ್ಕೆ ಜನರು ಬಂದು ಸೇರುತ್ತಾರೆ.

ವೀಡಿಯೊನೋಡುವಾಗ ಮಹಿಳೆಗೆ ಸ್ವಲ್ಪ ಗಾಯವಾಗಿರಬಹುದು ಎಂದು ಅನ್ನಿಸುತ್ತದೆ.ಆದ್ದರಿಂದಮಹಿಳೆ ನೆಲದಲ್ಲಿ ಕುಳಿತುಕೊಳ್ಳುತ್ತಾಳೆ. ಇಡೀ ಘಟನೆಯ ವೀಡಿಯೊ ಅಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿದಾಖಲಾಗಿತ್ತು. ಕಾರುಕಳ್ಳನ ಮುಂದೆ ಸಾಹಸ ಮೆರೆದ ಮಹಿಳೆ ಮಿಲಿಸಾ ಮೆರಿಯನ್‌ರೇ ಘಟನೆಯವೀಡಿಯೊವನ್ನು ಫೇಸ್‌ಬುಕ್‌ನಲ್ಲಿಪೋಸ್ಟ್ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News