×
Ad

ಮೋದಿ ಸರಕಾರಕ್ಕೆ ಮೂರು ವರ್ಷ ಬೆನ್ನಲ್ಲೆ ದೇಶಾದ್ಯಂತ ಗೋಹತ್ಯೆ ನಿಷೇಧ

Update: 2017-05-26 17:48 IST

ಹೊಸದಿಲ್ಲಿ, ಮೇ 26: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮೂರು ವರ್ಷ ಪೂರ್ಣಗೊಳಿಸಿರುವ ಬೆನ್ನಲ್ಲೆ ಇಂದು ದೇಶಾಧ್ಯಂತ ಗೋಹತ್ಯೆ ನಿಷೇಧಿಸಿ ಆದೇಶ ನೀಡಿದೆ.

ಗೋಹತ್ಯೆಗೆ 7 ವರ್ಷ ಸಜೆ ಮತ್ತು 1 ಲಕ್ಷ ರೂ. ದಂಡದ ಪ್ರಸ್ತಾಪವಿದೆ. ಶೀಘ್ರದಲ್ಲೇ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಲಿದೆ.

ಕೇಂದ್ರ ಪರಿಸರ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದ್ದು, ಹಸು, ಎತ್ತು,  ಕರು, ಎಮ್ಮೆ , ಒಂಟೆಯನ್ನು ಕಸಾಯಿಖಾನೆಗೆ ಮಾರಾಟ ಮಾಡುವಂತಿಲ್ಲ. ಬಲಿಕೊಡಲು ಮತ್ತು ಕೊಲ್ಲಲು ಜಾನುವಾರುಗಳನ್ನು ಮಾರಾಟ ಮಾಡುವಂತಿಲ್ಲ. ಇನ್ನು ಮುಂದೆ ಜಾನುವಾರುಗಳನ್ನು ರೈತರಿಗೆ ಮಾತ್ರ ಮಾರಾಟ ಮಾಡಬಹುದು. ಮಾರಾಟ ಮಾಡಿದವರು ಮತ್ತು ಖರೀದಿಸಿದವರು ರಶೀದಿ ಹೊಂದಿರಬೇಕು. ಕೃಷಿಗೆಂದು ಜಾನುವಾರು ಖರೀದಿ ಮಾಡಿದವರು ಆರು ತಿಂಗಳು ಮಾರಾಟ ಮಾಡುವಂತಿಲ್ಲ.

ಗುರುತು ಚೀಟಿ ಇಲ್ಲದೆ ವಾಹನಗಳಲ್ಲಿ ಜಾನುವಾರುಗಳನ್ನು ಸಾಗಿಸುವಂತಿಲ್ಲ. ಅಂತಾರಾಜ್ಯಗಳಿಗೆ ಜಾನುವಾರುಗಳ ಸಾಗಾಟ ನಿಷೇಧಿಸಲಾಗಿದೆ. 

ಗೋಹತ್ಯಾ ನಿಷೇಧ ಅಧಿಸೂಚನೆಯ ಹೈಲೈಟ್ಸ್:

►  ವಧಾಗೃಹಕ್ಕೆಗೋವುಗಳಮಾರಾಟವನ್ನು ನಿಷೇಧಿಸಲಾಗಿದೆ.

► ಪರವಾನಿಗೆ ಹೊಂದಿದ ಬ್ರೀಡರ್ಸ್‌ಗಳು ಮಾತ್ರ ಗೋವಧಾಗೃಹಗಳಿಗೆ ಮಾರಾಟಮಾಡಬಹುದು.

► ಕೃಷಿ ಜಮೀನು ಮಾಲೀಕರು ಮಾತ್ರ ಪ್ರಾಣಿ ಮಾರುಕಟ್ಟೆಯಲ್ಲಿಗೋವುಗಳನ್ನು ಮಾರಾಟಮಾಡಬಹುದು

► ಅಂತಾರಾಷ್ಟ್ರೀಯ ಗಡಿಯಿಂದ 50 ಕಿಮೀವರೆಗೆ ಪ್ರಾಣಿ ಸಂತೆಗಳಿಗೆ ನಿಷೇಧ.

► ರಾಜ್ಯದ ಗಡಿಗಳಿಂದ 25 ಕಿಮೀವರೆಗೆ ಯಾವುದೇ ಪ್ರಾಣಿ ಸಂತೆಗಳು ಇರುವಂತಿಲ್ಲ.

► ಪ್ರಾಣಿಯನ್ನು ಬೇರೆ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ವಿಶೇಷ ಅನುಮತಿ ಪಡೆದಿರಬೇಕು

► ಸಣ್ಣ ಪ್ರಾಯದಮತುತಿ ಅಶಕತಿ ಪ್ರಾಣಿಗಳನ್ನು ಮಾರುವಂತಿಲ್ಲ

► ಪ್ರಾಣಿ ಮಾರುಕಟ್ಟೆಗಳಲ್ಲಿ ಸರಿಯಾದ ರೀತಿಯ ಸೌಲಭ್ಯಗಳಿರಬೇಕು. ನೀರು, ಫ್ಯಾನು, ಬೆಡ್ಡು, ರ್ಯಾಂಪ್, ಜಾರಿ ಬೀಳದಂಥ ನೆಲ, ಪ್ರಾಣಿ ಚಿಕಿತ್ಸಾವ್ಯವಸ್ಥೆ, ಅನಾರೋಗ್ಯಪೀಡಿತ ಪ್ರಾಣಿಗಳಿಗೆ ಬೇರೆಗೃಹ ವ್ಯವಸ್ಥೆ ಇತ್ಯಾದಿ 30 ನಿಯಮಗಳಿವೆ.

► ವಹಿಸಿಕೊಳ್ಳುತಾತಿರೆ.ಸರಕಾರೀಅನುಮೋದಿತ ಪ್ರಾಣಿ ಕಲ್ಯಾಣ ಸಂಘಟನೆಗಳಿಂದಇಬ್ಬರು ಪ್ರತಿನಿಧಿಗಳು ಈ ಸಮಿತಿಯಲ್ಲಿರುತಾರೆ.

►ಮಾರುಕಟ್ಟೆಗಳಿಗೆತರುವಾಗ ಪ್ರಾಣಿಗಳನ್ನ ಸರಿಯಾಗಿ ತುಂಬಿಸಲಾಗಿರುವುದನ್ನು ವೆಟರಿನರಿ ಇನ್ಸ್‌ಪೆಕ್ಟರ್‌ರಿಂದ ದೃಢೀಕರಣ ಪಡೆಯುವುದು ಕಡ್ಡಾಯ. ಯಾವುದೇ ಪ್ರಾಣಿಯು ಮಾರಾಟಕ್ಕೆ ಯೋಗ್ಯವಲ್ಲ ಎಂಬುದನ್ನು ನಿರ್ಧರಿಸುವ ಹಕ್ಕು ವೆಟರ್ನರಿ ಇನ್ಸ್‌ಪೆಕ್ಟರ್‌ಗೆ ಇರುತದೆ.

ಯಾರಾರಿಗೆತೊಂದರೆ?
► ದೇಶದಲ್ಲಿರುವ ಮಾಂಸೋದ್ಯಮ ಹೆಚ್ಚೂ ಕಡಿಮೆ 1 ಲಕ್ಷಕೋಟಿಯಷ್ಟಿದೆ. ಶೇ.90ರಷ್ಟು ಮಾಂಸವು ಪ್ರಾಣಿ ಮಾರುಕಟ್ಟೆಗಳಿಂದಲೇ ಬರುತದೆ. ಪ್ರಾಣಿ ಮಾರುಕಟ್ಟೆಯ ಮೇಲೆ ಕೇಂದ್ರವು ನಿಯಂತ್ರಣ ಹೇರಿರುವುದರಿಂದ ದೇಶದಮಾಂಸೋದ್ಯಕ್ಕೆ ತೀವ್ರಹೊಡೆತ ಬೀಳುತದೆ.

► ನಿರುಪಯುಕತಿ ಮತುತಿ ವೃದ್ಧಹಸುಗಳನ್ನು ಮಾರಾಟ ಮಾಡಿಬಿಡುತಿದ್ದ ರೈತರ ಆದಾಯಕ್ಕೆ ಕತರಿ ಬೀಳುತದೆ.

► ಹಸುಗಳನ್ನು ಪಾಲಿಸಲಾಗದ ರೈತರು, ಗೋಕೇಂದ್ರಗಳಲ್ಲಿಅವುಗಳ ಪಾಲನೆಗೆಇಂತಿಷ್ಟು ಹಣ ತೆರಬೇಕಾಗುತತಿದೆ.

►ಹಸುಗಳ ವ್ಯಾಪಾರ ಮಾಡಲು ಸಾಕಷ್ಟು ಕಾಗದ ಪತ್ರಗಳ ಕೆಲಸದ ಅಗತ್ಯವಿರುತದೆ. ಇಂಥ ಬಹುತೇಕ ವ್ಯಾಪಾರಸ್ಥರು ನಿರಕ್ಷರಿಗಳಾಗಿರುವುದರಿಂದ ಸಾಕಷ್ಟು ತೊಂದರೆಯಾಗುತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News