×
Ad

ದಿಲ್ಲಿ ಹೋಟೆಲ್‌ನಲ್ಲಿ ಎನ್‌ಆರ್‌ಐ ಮಹಿಳೆ ಮೇಲೆ ಅತ್ಯಾಚಾರ

Update: 2017-05-27 09:34 IST

ಹೊಸದಿಲ್ಲಿ, ಮೇ 27: ಇಲ್ಲಿನ ನಬಿ ಕರೀಂ ಪ್ರದೇಶದಲ್ಲಿ 22 ವರ್ಷದ ಅನಿವಾಸಿ ಭಾರತೀಯ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. 25 ವರ್ಷದ ಈ ಯುವಕ ಹರ್ಯಾಣ ಮೂಲದವನು.

ಯುವತಿಯು ಅಮೆರಿಕದಿಂದ ಭಾರತಕ್ಕೆ ಬಂದ ಬಳಿಕ ಮೂವರ ಜತೆ ಸ್ನೇಹ ಸಂಪಾದಿಸಿದ್ದು, ಇವರು ಬುಧವಾರ ಹೋಟೆಲ್ ಒಂದಕ್ಕೆ ಔತಣಕೂಟಕ್ಕೆ ಆಹ್ವಾನಿಸಿದ್ದರು. ಹೀಗೆ ಹೋಗಿದ್ದಾಗ ಇತರ ಇಬ್ಬರು ಸ್ನೇಹಿತರು ಶಾಪಿಂಗ್‌ಗೆ ತೆರಳಿದರು. ಕೊಠಡಿಯಲ್ಲಿ ಉಳಿದ ಯುವಕ ಅತ್ಯಾಚಾರ ಎಸಗಿದ ಎಂದು ಸಂತ್ರಸ್ತೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಮೆರಿಕದಿಂದ ಅಧ್ಯಯನ ವೀಸಾದಲ್ಲಿ ಆಕೆ ಭಾರತಕ್ಕೆ ಬಂದಿದ್ದಳು.

ಆರೋಪಿಯನ್ನು ಬಂಧಿಸಲಾಗಿದ್ದು, ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿ ಹಾಗೂ ಲಾಗ್‌ಬುಕ್ ವಶಪಡಿಸಿಕೊಂಡಿದ್ದಾರೆ. ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಂತ್ರಸ್ತೆ ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News