ಸಾರಿಗೆ ನಿಯಮ ಉಲ್ಲಂಘಿಸಿದ ಒಂದೂವರೆ ಲಕ್ಷ ಕ್ಕೂ ಹೆಚ್ಚು ಮಂದಿಯ ಚಾಲನಾ ಪರವಾನಿಗೆ ಅಮಾನತು
ತಿರುವನಂತಪುರಂ,ಮೇ 27: ಅಕ್ಟೋಬರ್ 2016ರ ನಂತರ ಸಾರಿಗೆ ನಿಯಮ ಉಲ್ಲಂಘಿಸಿದವರ ಡ್ರೈವಿಂಗ್ ಲೈಸನ್ಸ್‌ತಾತ್ಕಾಲಿಕವಾಗಿ ಅಮಾನತಿನಲ್ಲಿಡಲು ಕೇರಳ ಮೋಟಾರು ವಾಹನ (ಸಾರಿಗೆ ) ಇಲಾಖೆ ನಿರ್ಧರಿಸಿದೆ. ಸುಪ್ರೀಂಕೋರ್ಟಿನ ನಿರ್ದೇಶನ ಪ್ರಕಾರ ಸಾರಿಗೆ ಇಲಾಖೆ ಹೊರಡಿಸಿರುವ ಆದೇಶ ಪತ್ರದಲ್ಲಿ ಈವಿವರಗಳಿವೆ. ಶನಿವಾರದಿಂದ ಆದೇಶ ಜಾರಿಗೊಳ್ಳುತ್ತಿದ್ದು, ಕೇರಳದಲ್ಲಿ 1,58,922 ಮಂದಿ ಲೈಸನ್ಸ್ ತಾತ್ಕಾಲಿಕ ಅಮಾನತಿಗೊಳಗಾಗಿ ಮೌಲ್ಯಹೀನಗೊಳ್ಳಲಿದೆ.
ಸುಪ್ರೀಂಕೋರ್ಟಿನ ತೀರ್ಪು 2016 ಅಕ್ಟೋಬರ್‌ನಲ್ಲಿ ಹೊರಬಂದಿತ್ತು. ಆನಂತರ ಸಾರಿಗೆ ನಿಯಮಗಳನ್ನು ಉಲ್ಲಂಘಿಸಲ್ಪಟ್ಟು ಸಿಕ್ಕಿಬಿದ್ದವರ ಲೈಸನ್ಸ್ ಮೂರು ತಿಂಗಳ ಅವಧಿಗೆ ಅನೂರ್ಜಿತಗೊಳ್ಳಲಿದೆ. ಆನಂತರ ಲೈಸನ್ಸ್‌ನ್ನು ನವೀಕರಿಸಿ ನೀಡಲಾಗುತ್ತದೆ. ಸಾರಿಗೆ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಈತೀರ್ಮಾನವನ್ನು ತಳೆಯಲಾಗಿದೆ. ಅಮಾನತು ಕ್ರಮಕ್ಕಾಗಿ ಎಲ್ಲ ಆರ್‌ಟಿಒ ಕಚೇರಿಗಳಲ್ಲಿ ವಿಶೇಷ ವಿಭಾಗವನ್ನು ಆರಂಭಿಸಲು ಸೂಚನೆ ನೀಡಲಾಗಿದೆ. ಪೊಲೀಸರು ಮತ್ತುಸಾರಿಗೆ ಇಲಾಖೆ ಇವರೆಡಕ್ಕೂ ಸಿಕ್ಕಿಬಿದ್ದ ನಿಯಮ ಉಲ್ಲಂಘಿಸಿದವರನ್ನು ಒಟ್ಟಿಗೆ ಪರಿಗಣಿಸಿ ಅಮಾನತು ಕ್ರಮವನ್ನು ಜಾರಿಗೆ ತರಲಾಗುತ್ತಿದೆ.