ಅಧ್ಯಾಪಕರಿಗೆ ಯೋಗ ಗೊತ್ತಿರಬೇಕು: ಯುಜಿಸಿ

Update: 2017-05-27 09:23 GMT

ತಿರುವನಂತಪುರಂ,ಮೇ 27: ಉನ್ನತ ವಿದ್ಯಾಭ್ಯಾಸ ಕ್ಷೇತ್ರದ ಅಧ್ಯಾಪಕರು ಯೋಗ ಕಲಿಯಬೇಕೆಂದು ಯುಜಿಸಿ ಸೂಚಿಸಿದೆ. ಕಾಲೇಜುಗಳ ವಾರ್ಷಿಕೋತ್ಸವ ಮುಂತಾ ದ ಸಂದರ್ಭಗಳಲ್ಲಿ ಯೋಗವನ್ನು ಒಂದು ಕಾರ್ಯಕ್ರಮವಾಗಿ ಸೇರ್ಪಡೆಗೊಳಿಸಬೇಕು ಎಂದು ಸೂಚಿಸಲಾಗಿದೆ. ಜೂನ್ 21ಕ್ಕೆ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಗುತ್ತಿರುವ ಪ್ರಯುಕ್ತ ವಿಶ್ವವಿದ್ಯಾನಿಲಯಗಳ ಕುಲಪತಿಗಳಿಗೆ ಕಳುಹಿಸಿದ ಪತ್ರದಲ್ಲಿ ಈ ಸೂಚನೆ ನೀಡಲಾಗಿದೆ. ಹೆಚ್ಚು ಜನರನ್ನು ಯೋಗ ತರಬೇತಿಗೆ ಸೇರಿಸಿಕೊಳ್ಳಬೇಕು. ಯೋಗತರಗತಿಗಳನ್ನು ಆಯೋಜಿಸಬೇಕು, ತರಬೇತಿ ಕೇಂದ್ರಗಳ ಸಹಾಯದಿಂದ ಯೋಗ ಪ್ರಚಾರ ಮಾಡಬೇಕು ಪ್ರತಿಯೊಂದು ಸಂಸ್ಥೆಯೂ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಮುಂತಾದ ಕೇಂದ್ರ ಸರಕಾರದ ನಿರ್ದೇಶನಗಳನ್ನು ಅನುಸರಿಸಿ ಯುಜಿಸಿ ವಿಶ್ವವಿದ್ಯಾನಿಲಯಗಳ ಮುಖ್ಯಸ್ಥರಿಗೆ ಸೂಚನೆ ನೀಡಿದೆ. ಜೊತೆಗೆ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ನಡೆಸಿದ ಯೋಗಕಾರ್ಯಕ್ರಮಗಳ ಪಟ್ಟಿಯನ್ನು ಹತ್ತು ದಿವಸಗಳಲ್ಲಿ ಯುಜಿಸಿಗೆ ಸಲ್ಲಿಸಬೇಕೆಂದು ಪತ್ರದಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News