ರಜಾದಿನಗಳಲ್ಲಿ ಏನಾದರೂ ಹೊಸತನ್ನು ಮಾಡಿ: ಪ್ರಧಾನಿ ಮೋದಿ

Update: 2017-05-28 06:31 GMT

ಹೊಸದಿಲ್ಲಿ, ಮೇ 28: ರಜಾದಿನಗಳಲ್ಲಿ ಏನಾದರೂ ಹೊಸತನ್ನು ಮಾಡಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

32ನೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯುವಕರು ಕಂಫರ್ಟ್ ಝೋನ್ ನಿಂದ ಹೊರಬರಬೇಕಾಗಿದೆ ಎಂದರು

ಕೇಂದ್ರ ಸರಕಾರ ಮೂರು ವರ್ಷ ಪೂರ್ಣಗೊಳಿಸಿದ ಬಳಿಕ ಮೊದಲ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಅವರು “ ನನ್ನ ಸಲಹೆಯನ್ನು ಜನರು ಗಂಭೀರವಾಗಿ ಪರಿಗಣಿಸಿದ್ದಾರೆ. ಹೊಸ ವಿಚಾರಗಳನ್ನು ತಿಳಿಯಲು ಪ್ರಯತ್ನಿಸಿದ್ದಾರೆ ''ಎಂದರು.

ನಮ್ಮಲ್ಲಿ ಎಲ್ಲರೂ ಒಟ್ಟಾಗಿ  ಬಾಳುವ ಕಲೆಯಿದೆ.. ಜೂನ್ 5 ವಿಶ್ವ ಪರಿಸರ ದಿನ. ನಾವು ನಮ್ಮ ಪರಿಸರವನ್ನು ಚೆನ್ನಾಗಿ ನೋಡಬೇಕು. ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ವಿಶೇಷ ಶಕ್ತಿಯಿದೆ. ಬುಧ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಗಿತ್ತು.  ವೇದಗಳಲ್ಲಿ ಭೂಮಿ, ಪರಿಸರ ಜೀವನ ಕೇಂದ್ರವೆನ್ನಲಾಗಿದೆ

ಜೂನ್ 21ರಂದು ವಿಶ್ವ ಯೋಗ ದಿನ. ಭಾರತ ವಿಶ್ವಕ್ಕೆ ನೀಡಿದ ಮಹತ್ವದ ಕೊಡುಗೆ ಯೋಗ. ಯೋಗದ ಮೂಲಕ ಒತ್ತಡರಹಿತ ಜೀವನ ಸಾಧ್ಯ . ಎಂದರು.

ಎಲ್ಲ ಮುಸ್ಲಿಂ ಬಾಂಧವರಿಗೂ ರಂಝಾನ್ ತಿಂಗಳ ಶುಭಾಶಯ ಹೇಳಿದ ಮೋದಿ ಅವರು ಪ್ರತಿಯೊಂದು ಧರ್ಮವೂ ಶಾಂತಿ, ಸಹಬಾಳ್ವೆಯನ್ನು ಸಾರುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News