×
Ad

ಸಿಬಿಎಸ್ಇ ಫಲಿತಾಂಶ ಪ್ರಕಟ: ರಕ್ಷಾ ಗೋಪಾಲ್‌ ( ಶೇ.99.6 ) ಅಗ್ರ

Update: 2017-05-28 13:04 IST

ಹೊಸದಿಲ್ಲಿ, ಮೇ 28: ಕೇಂದ್ರ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್ಇ) ಯ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ ನೋಯ್ಡಾದ  ಅಮಿತಿ ಇಂಟರ್ ನ್ಯಾಷನಲ್ ಶಾಲೆಯ ರಕ್ಷಾ ಗೋಪಾಲ್ ಶೇಕಡಾ 99.6 ಅಂಕ ಗಳಿಸುವ ಮೂಲಕ ದೇಶದಲ್ಲಿಯೇ ಅಗ್ರ ಸ್ಥಾನ ಗಳಿಸಿದ್ದಾರೆ.

  ಚಂಡೀಗಢದ ಭೂಮಿ ಸಾವಂತ್   ಶೇ 99.4 ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ಅಗ್ರ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಚಂಡೀಗಢದ ಭವನ್ ವಿದ್ಯಾಲಯದ ಆದಿತ್ಯ ಜೈನ್ ಮತ್ತು ಮನ್ನತ್‌ ಲುತ್ರಾ  ಶೇಕಡಾ 99.2 ಅಂಕ ಗಳಿಸಿದ್ದಾರೆ.
ಈ ವರ್ಷ ಸಿಬಿಎಸ್ಇ 12ನೇ ತರಗತಿಯ ತೇರ್ಗಡೆ ಅಂಕ ಶೇಕಡಾ 82ರಷ್ಟಿದೆ. ಕಳೆದ ವರ್ಷ ಇದು ಶೇಕಡಾ 83.05ರಷ್ಟಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News