ಮೂವರು ಭಾರತೀಯ ಎವರೆಸ್ಟ್ ಪರ್ವತಾರೋಹಿಗಳ ಶವಗಳು ಪತ್ತೆ
Update: 2017-05-28 22:37 IST
ಕಠ್ಮಂಡು, ಮೇ 28: ಎವರೆಸ್ಟ್ ಶಿಖರ ಆರೋಹಣದ ಸಂದರ್ಭದಲ್ಲಿ ಮೃತಪಟ್ಟಿದ್ದ ಮೂವರು ಭಾರತೀಯ ಪರ್ವತಾರೋಹಿಗಳ ರವಿವಾರ ಪತ್ತೆಯಾಗಿವೆ. ಅವರಲ್ಲಿ ಇಬ್ಬರು ಕಳೆದ ವರ್ಷದ ಪರ್ವತಾರೋಹಣದ ವೇಳೆ ಮೃತಪಟ್ಟವರಾಗಿದ್ದಾರೆ. ಈ ಮೂರು ಶವಗಳನ್ನು ಹೆಲಿಕಾಪ್ಟರ್ ಮೂಲಕ ನೇಪಾಳ ರಾಜಧಾನಿ ಕಠ್ಮಂಡುಗೆ ತರಲಾಗಿದೆ.
ಪರ್ವತಾರೋಹಿಗಳಾದ ಪರೇಶ್ ಚಂದ್ರನಾಥ್ (58) ಹಾಗೂ ಗೌತಮ್ ಘೋಷ್ (50) ಕಳೆದ ವರ್ಷದ ಎಪ್ರಿಲ್ 7ರಂದು ಎವರೆಸ್ಟ್ ಪರ್ವತಾರೋಹಣದ ವೇಳೆ ನಾಪತ್ತೆಯಾಗಿದ್ದರು. ಇಂದು ಅವರ ಶವಗಳು ಪತ್ತೆಯಾಗಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಮೂರನೆಯ ಪರ್ವತಾರೋಹಿ ರವಿ ಕುಮಾರ್ (27) ಕಲೆದ ವಾರ ಎವರೆಸ್ಟ್ ಏರುತ್ತಿದ್ದಾಗ ಹಿಮಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದರು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಠ್ಮಂಡುವಿನಲ್ಲಿರುವ ತ್ರಿಭುವನ್ ವಿವಿಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಆನಂತರ ಅದನ್ನು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.