ಐಐಟಿ ಮದ್ರಾಸ್ ವಿದ್ಯಾರ್ಥಿಗಳಿಂದ "ಬೀಫ್ ಉತ್ಸವ"
Update: 2017-05-29 12:20 IST
ಚೆನ್ನೈ, ಮೇ 29: ಕಸಾಯಿಖಾನೆಗಳಿಗೆ ಗೋವುಗಳನ್ನು ಸಾಗಾಟ ಮಾಡುವುದನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ವಿರೋಧಿಸಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ನಲ್ಲಿ ವಿದ್ಯಾರ್ಥಿಗಳು ರವಿವಾರ ತಡರಾತ್ರಿ ಬೀಫ್ ಉತ್ಸವ ನಡೆಸಿದರು.
ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಕೇಂದ್ರ ಸರಕಾರದ ಆದೇಶ ವಿರೋಧಿಸಿ ಮೇ 27ರಂದು ತಿರುವನಂತಪುರಂನ ಯುನಿವರ್ಸಿಟಿ ಕಾಲೇಜಿನ ಮುಂಭಾಗ ಬೀಫ್ ತಿನ್ನುವ ಮೂಲಕ ಪ್ರತಿಭಟನೆ ನಡೆದಿದ್ದು, ಚೆನ್ನೈಯಲ್ಲಿ ನಡೆದ ಬೀಫ್ ಉತ್ಸವದಲ್ಲಿ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.