ಸೌದಿ: ಕಾರ್ಮಿಕ, ವಾಸ್ತವ್ಯ ಕಾನೂನು ಉಲ್ಲಂಘನೆಗೆ ತಡೆ
Update: 2017-05-30 22:26 IST
ರಿಯಾದ್, ಮೇ 30: ಕಾರ್ಮಿಕ ಮತ್ತು ವಾಸ್ತವ್ಯ ವ್ಯವಸ್ಥೆಗಳ ಉಲ್ಲಂಘನಕಾರರನ್ನು ಪತ್ತೆಹಚ್ಚಲು ಭದ್ರತಾ ಸಂಸ್ಥೆಗಳೊಂದಿಗೆ ಕೈಜೋಡಿಸುವಂತೆ ವಾಣಿಜ್ಯ ಮತ್ತು ಹೂಡಿಕೆ ಸಚಿವಾಲಯವು ಸೌದಿ ಚೇಂಬರ್‌ಗಳ ಮಂಡಳಿಗೆ ಕರೆ ನೀಡಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.ಕಳೆದ ತಿಂಗಳು ಆಂತರಿಕ ಸಚಿವಾಲಯ ಘೋಷಿಸಿದ ‘ಉಲ್ಲಂಘನೆಗಳಿಲ್ಲದ ದೇಶ’ ಅಭಿಯಾನಕ್ಕೆ ಪೂರಕವಾಗಿ ವಾಣಿಜ್ಯ ಸಚಿವಾಲಯ ಈ ಕರೆ ನೀಡಿದೆ.