ಪ್ರಯಾಣದಲ್ಲಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಮದ್ಯಪಾನಿ !
ಹೊಸದಿಲ್ಲಿ, ಮೇ 31: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಾಗಿಲು ತೆರೆಯಲು ಪ್ರಯತ್ನಿಸಿದ ರಷ್ಯನ್ ಪ್ರವಾಸಿಯೊಬ್ಬರನ್ನು ದಿಲ್ಲಿವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ನಂತರ ಕೋರ್ಟಿಗೆ ಹಾಜರು ಪಡಿಸಿ 50,000ರೂಪಾಯಿ ದಂಡ ವಿಧಿಸಲಾಗಿದೆ.
ಮಾಸ್ಕೊದಿಂದ ದಿಲ್ಲಿಗೆ ಬರುತ್ತಿದ್ದ ರಷ್ಯನ್ ವಿಮಾನಕಂಪೆನಿ ಏರೊಪ್ಲಾಟ್‌ನ ವಿಮಾನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಘಟನೆ ನಡೆದಿದೆ. ವಿಮಾನದ ನೌಕರ ಈತನನ್ನು ತಡೆದು ದಿಲ್ಲಿ ಏಕ್‌ಕ್ರಾಫ್ಟ್ ಕಂಟ್ರೋಲರ್‌ಗೆ ಸುದ್ದಿ ಮುಟ್ಟಿಸಿದ್ದರು. ವಿಮಾನ ನಿಲ್ದಾಣದ ಪೊಲೀಸರ ನೆರವನ್ನೂ ಪಡೆಯಲಾಯಿತು. ನಂತರ ಸಿಐಎಸ್‌ಎಫ್ ಅಧಿಕಾರಿಗಳು ಮದ್ಯಪಾನಿ ವ್ಯಕ್ತಿಯನ್ನು ಬಂಧಿಸಿದರು. ನಂತರ ಪೈಲಟ್ ಈತನ ವಿರುದ್ಧ ಪೈಲಟ್ ಡಿಸ್ಟರ್ಬೇಶನ್ ವರದಿ ನೀಡಿದರು.
ವಿಮಾನಯಾನ ಕಾನೂನು ಪ್ರಕಾರ ಪ್ರಯಾಣಿಕನ ವಿರುದ್ಧ ಕ್ರಮ ಜರಗಿಸಲಾಗಿದೆ. ಅತನಿಗೆ 50,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ವಿಮಾನ ನಿಲ್ದಾಣದ ಡಿಸಿಪಿ ಸಂಜಯ್ ಭಾಟಿಯಾ ತಿಳಿಸಿದ್ದಾರೆ.