ಪಾನ್ ಜೊತೆ ಆಧಾರ್ ಜೋಡಣೆಗೆ ಎಸ್‌ಎಂಎಸ್ ಸೌಲಭ್ಯ
Update: 2017-05-31 20:07 IST
ಹೊಸದಿಲ್ಲಿ,ಮೇ 31: ಎಸ್‌ಎಂಎಸ್ ಆಧಾರಿತ ಸೌಲಭ್ಯವನ್ನು ಬಳಸಿಕೊಂಡು ಆಧಾರ್ ಸಂಖ್ಯೆಯನ್ನು ಪಾನ್ ಸಂಖ್ಯೆಯೊಂದಿಗೆ ಸಂಪರ್ಕಿಸಬೇಕೆಂದು ಆದಾಯ ತೆರಿಗೆ ಇಲಾಖೆಯು ಬುಧವಾರ ತೆರಿಗೆಪಾವತಿದಾರರಿಗೆ ತಿಳಿಸಿದೆ.
567678 ಅಥವಾ 56161 ದೂರವಾಣಿ ಸಂಖ್ಯೆಗಳಿಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ಆಧಾರ್ ಹಾಗೂ ಪಾನ್ ಸಂಖ್ಯೆಗಳನ್ನು ಪರಸ್ಪರ ಜೋಡಿಸಬಹುದೆಂದು ಅದು ಹೇಳಿದೆ.
ಈ ಎರಡು ಸಂಖ್ಯೆಗಳನ್ನು ಜೋಡಿಸಲು ಸಾರ್ವಜನಿಕರು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ನ್ನು ಕೂಡಾ ಬಳಸಿಕೊಳ್ಳಬಹುದೆಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಆಧಾರ್ ಸಂಖ್ಯೆಯನ್ನು ಪಾನ್ ಜೊತೆ ಜೋಡಿಸುವ ಆನ್‌ಲೈನ್ ಸೌಲಭ್ಯವನ್ನು ಆದಾಯ ತೆರಿಗೆ ಇಲಾಖೆ ಈ ತಿಂಗಳ ಆರಂಭದಲ್ಲಿ ಅನಾವರಣಗೊಳಿಸಿತ್ತು. ಆದಾಯ ತೆರಿಗೆ ಮರುಪಾವತಿಗೆ ಆಧಾರ್ ಸಂಖ್ಯೆಯೊಂದಿಗೆ ಪ್ಯಾನ್ ಜೋಡಣೆಯನ್ನು ಈಗ ಕಡ್ಡಾಯಗೊಳಿಸಲಾಗಿದೆ.