×
Ad

ಶೂಟಿಂಗ್ ಸೆಟ್ ಕುಸಿದು ಅವಘಡ: ಶಾರೂಖ್ ಖಾನ್ ಗೆ ಗಾಯ

Update: 2017-05-31 21:33 IST

ಹೊಸದಿಲ್ಲಿ, ಮೇ 31: ಕೆಲ ಸಮಯದ ಹಿಂದೆ ಚಿತ್ರವೊಂದರ ಪ್ರಮೋಷನ್ ವೇಳೆ ಸಂಭವಿಸಿದ್ದ ಅವಘಡವೊಂದರಲ್ಲಿ ಪಾರಾಗಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಚಿತ್ರೀಕರಣವೊಂದರ ಸಂದರ್ಭ ಅಪಾಯ ಎದುರಾಗಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾರೆ. 

ಶಾರೂಖ್ ನಟನೆಯ 'ಡ್ವಾರ್ಫ್‌' ಚಿತ್ರದ ಶೂಟಿಂಗ್ ಮೀರತ್ ನಲ್ಲಿ ನಡೆಯುತ್ತಿದ್ದ ವೇಳೆ ಸೆಟ್ ನ ಮೇಲ್ಛಾವಣಿ ಕುಸಿದು ಅವಘಡ ಸಂಭವಿಸಿದೆ. ಮೇಲ್ಛಾವಣಿಯ ಅವಶೇಷಗಳು ಬಿದ್ದ ಜಾಗದಲ್ಲೇ ಶಾರೂಖ್ ಖಾನ್ ಕುಳಿತಿದ್ದರು. ಅವರ ಮೇಲೆಯೇ ಅವಶೇಷಗಳು ಬಿದ್ದುದ್ದರಿಂದ ಗಾಯಗೊಂಡಿದ್ದಾರೆ. ಈ ಅವಘಡದಲ್ಲಿ ಮತ್ತಿಬ್ಬರಿಗೂ ಗಾಯಗಳಾಗಿವೆ. 

ಆನಂದ್  ರಾಯ್ ಅವರು 'ಡ್ವಾರ್ಫ್‌' ಚಿತ್ರವನ್ನು ನಿರ್ದೇಶಿಸುತ್ತಿದ್ದು,  ಶಾರೂಖ್ ಜೊತೆ ಕತ್ರಿನಾ ಕೈಫ್, ಅನುಷ್ಕಾ ಶರ್ಮಾ ಕೂಡಾ ತಾರಾಂಗಣ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News