×
Ad

ನೂಲು ತಿಂದು ಟ್ವಿಟರಿಗರಿಗೆ ಆಹಾರವಾದ ಸಲ್ಮಾನ್ ಖಾನ್: ನಗೆಪಾಟಲಿಗೀಡಾಗಲು ಕಾರಣವೇನು ಗೊತ್ತೇ?

Update: 2017-05-31 23:06 IST

ಹೊಸದಿಲ್ಲಿ, ಮೇ 31: ಬಾಲಿವುಡ್ ನಟ ಸಲ್ಮಾನ್ ಖಾನ್ ಬಗ್ಗೆ ಹರಡುವ ಗಾಸಿಪ್ ಸುದ್ದಿಗಳಿಗೇನೂ ಬರವಿಲ್ಲ. ಸದಾ ಒಂದಿಲ್ಲೊಂದು ವಿವಾದಗಳಿಗೆ ತುತ್ತಾಗುತ್ತಿದ್ದ ಸಲ್ಮಾನ್ ಇತ್ತೀಚಿನ ವರ್ಷಗಳಲ್ಲಿ “ಬ್ಯಾಡ್ ಬಾಯ್” ಇಮೇಜ್ ನಿಂದ ಹೊರಬಂದಿದ್ದರು. ಈ ಬಾರಿ ಮತ್ತೊಮ್ಮೆ ಸಲ್ಮಾನ್ ಖಾನ್ ಸುದ್ದಿಯಾಗಿರುವುದು ವಿವಾದಗಳಿಂದಲ್ಲ. ಬದಲಾಗಿ, ತಿನ್ನುವ ವಿಷಯದಿಂದ.

ತಮ್ಮ ಮುಂದಿನ ಚಿತ್ರ “ಟ್ಯೂಬ್ ಲೈಟ್” ಬಗ್ಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಲ್ಮಾನ್ ಖಾನ್ ತಮ್ಮದೇ ಪ್ಯಾಂಟಿನ ನೂಲುಗಳನ್ನು ತಿನ್ನುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಪತ್ರಿಕಾಗೋಷ್ಟಿ ಬೋರು ಹೊಡೆದಿತ್ತೋ ಅಥವಾ ಅಭ್ಯಾಸ ಬಲವೋ ಸಲ್ಮಾನ್ ಪ್ಯಾಂಟಿನ ನೂಲೊಂದನ್ನು ಕಿತ್ತು ಜಗಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ  ವಿಡಿಯೋಗೆ ಸಾಕಷ್ಟು ಹಾಸ್ಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News