×
Ad

ನ್ಯಾಯಾಲಯದ ತಡೆ, ಸರಕಾರದ ನಿಲುವು: ಕೇರಳಕ್ಕೆ ಮಾಂಸದ ಜಾನುವಾರುಗಳ ಸಾಗಾಟ ಅಬಾಧಿತ

Update: 2017-06-01 12:21 IST

ತೊಡುಪುಝ,ಜೂನ್ 1: ಜಾನುವಾರುಗಳನ್ನು ಮಾಂಸಕ್ಕಾಗಿ ಮಾರುವುದನ್ನು ನಿಷೇಧಿಸಿದ ಕೇಂದ್ರಸರಕಾರದ ವಿಧೇಯಕಕ್ಕೆ ಮದ್ರಾಸ್ ಹೈಕೋರ್ಟು ತಡೆಯಾಜ್ಞೆ ನೀಡಿರುವುದರಿಂದ ಕೇರಳಕ್ಕೆ ಮಾಂಸೊದ್ಯಮಕ್ಕೆ ಜಾನುವಾರುಗಳ ಸಾಗಾಟ ಅಡೆತಡೆಯಿಲ್ಲದೆ ನಡೆಯುತ್ತಿದೆ. ಕೇರಳದ ಗಡಿ ತಪಾಸಣಾ ಕೇಂದ್ರದ ಮೂಲಕ ಕೇರಳಕ್ಕೆ ಬುಧವಾರದಿಂದ ಜಾನುವಾರುಗಳು ಸಾಗಾಟವಿತ್ತು. ಕೇರಳ ಸರಕಾರದ ಅನುಕೂಲಕರ ನಿಲುವಿನಿಂದಾಗಿ ಜಾನುವಾರು ಸಾಗಾಟ, ಕಡಿಯುವುದಕ್ಕೆ ಯಾವುದೇ ತೊಂದರೆಯಾಗಿಲ್ಲ.

ಕುಮಳಿ, ಕಂಬಂಮೆಟ್ಟ್ ಚೆಕ್‌ಪೋಸ್ಟ್‌ಗಳ ಮೂಲಕ ನಿನ್ನೆ ಸುಮಾರು 1,500 ಜಾನುವಾರುಗಳು ತಮಿಳ್ನಾಡಿನಿಂದ ಕೇರಳಕ್ಕೆ ಸಾಗಾಟವಾಗಿದ್ದು, ಕೇಂದ್ರಸರಕಾರದ ನಿಷೇಧದ ನಂತರ ಇಷ್ಟು ಭಾರೀ ಸಂಖ್ಯೆಯಲ್ಲಿ ಕೇರಳಕ್ಕೆ ಜಾನುವಾರುಗಳನ್ನು ತಂದಿರುವುದು ಇದೇ ಪ್ರಥಮವಾಗಿದೆ.

ಕೇಂದ್ರ ಸರಕಾರದ ನಿಷೇಧಕ್ಕಿಂತ ಮೊದಲು ಕೇರಳದಲ್ಲಿ ಯಾವುದೇ ಅಡೆತಡೆಯಿಲ್ಲದೆ ಭಾರೀ ಸಂಖ್ಯೆಗಳಲ್ಲಿ ಜಾನುವಾರುಗಳನ್ನು ಕೇರಳಕ್ಕೆ ತರಲಾಗುತ್ತಿತ್ತು. ಕೇಂದ್ರದ ಕಾನೂನು ಏನೆ ಇದ್ದರೂ ಕೇರಳದಲ್ಲಿ ಅದು ಜಾರಿಯಾಗುವುದಿಲ್ಲ ಎನ್ನುವ ಧೈರ್ಯದಲ್ಲಿ ತಮಿಳ್ನಾಡಿನಿಂದ ಜಾನುವಾರು ಸಾಗಾಟ ಸಂಪೂರ್ಣ ನಿಂತುಹೋಗಿರಲಿಲ್ಲ.ತೊಡುಪುಝ ಜಿಲ್ಲೆಯ ಪ್ರಧಾನ ಸಂತೆ ಕೊಡಿಕುತ್ತಿ ಎನ್ನುವಲ್ಲಿಂದ ಕೇರಳ ಮತ್ತು ಇತರ ಭಾಗಗಳಿಗೆ ಜಾನುವಾರು ಸಾಗಾಟ ಆಗುತ್ತದೆ. ಕೊಡಿಕುತ್ತಿ ಸಂತೆಗೆ ಕರ್ನಾಟಕ,ಆಂಧ್ರ, ತಮಿಳುನಾಡುಗಳಿಂದ ಲಾರಿ, ರೈಲುಮೂಲಕ ಜಾನುವಾರುಗಳನ್ನು ತರಲಾಗುತ್ತಿದೆ.

ತಮಿಳ್ನಾಡಿನ ದೊಡ್ಡ ದೊಡ್ಡ ವ್ಯಾಪಾರಿಗಳು ಕೇರಳದ ವಿವಿಧ ಸ್ಥಳಗಳಿಗೆ ಜಾನುವಾರುಗಳನ್ನು ತಲುಪಿಸುತ್ತಿದ್ದಾರೆ. ಇಡುಕ್ಕಿಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳ ಮೂಲಕ ವಾರಕ್ಕೆ ಸಾವಿರಾರು ಜಾನುವಾರುಗಳ ಸಾಗಾಟ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News