ಸಮಾಜವಾದಿ ಜಾತ್ಯತೀತ ಮೋರ್ಚಾ ಜೂ.6ಕ್ಕೆ: ಶಿವಪಾಲ್ ಯಾದವ್
Update: 2017-06-01 12:59 IST
ಲಕ್ನೊ,ಜೂನ್. 1: ತಾನು ರೂಪಿಸುತ್ತಿರುವ ಸಮಾಜವಾದಿ ಜಾತ್ಯತೀತ ಮೋರ್ಚಾವನ್ನು ಅಧಿಕೃತವಾಗಿ ಜೂನ್ ಆರರಂದು ಘೋಷಿಸುತ್ತೇನೆ ಎಂದು ಶಿವಪಾಲ್ ಯಾದವ್ ಹೇಳಿದ್ದಾರೆ. ಮುಲಾಯಂಸಿಂಗ್ ಹೊಸ ಪಕ್ಷದ ನೇತೃತ್ವವನ್ನು ವಹಿಸಲಿದ್ದು, ಸಮಾಜವಾದಿ ಪಾರ್ಟಿಯನ್ನು ಸರಿಯಾದ ದಾರಿಯಲ್ಲಿಮುಂದೊಯ್ಯಲು ಮೋರ್ಚಾವನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಮುಲಾಯಂ ಸಿಂಗ್ ಯಾದವ್ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಆಗಿರುತ್ತಾರೆ.
ಶಿವಪಾಲ್ ಯಾದವ್ ಸಂಯೋಜಕನಾಗಿ ಕಾರ್ಯ ನಿರ್ವಹಿ ಸಲಿದ್ದಾರೆ. ಉತ್ತರಪ್ರದೇಶ ಚುನಾವಣೆಗೆ ಸಂಬಂಧಿಸಿ ಅಖಿಲೇಶ್ ಯಾದವ್ ಮತ್ತು ಶಿವಪಾಲ್ ಯಾದವ್ ಪರಸ್ಪರ ಜಟಾಪಟಿ ನಡೆಸಿದ್ದರು. ಅಖಿಲೇಶ್‌ರ ತಂದೆ ಮುಲಾಯಂ ಪುತ್ರನಿಂದ ದೂರವಾಗಿ ಶಿವಪಾಲ್‌ರ ಜೊತೆಗಿದ್ದಾರೆ.