ಕೇರಳದಲ್ಲಿ ಮದ್ಯದಂಗಡಿ ತೆರೆಯಲು ಇನ್ನು ಪಂಚಾಯತ್ ಅನುಮತಿ ಅಗತ್ಯವಿಲ್ಲ
Update: 2017-06-01 15:59 IST
ತಿರುವನಂತಪುರಂ,ಜೂ.1: ಮದ್ಯದಂಗಡಿ ತೆರೆಯಲು ಪಂಚಾಯತ್‌ನ ಅನುಮತಿ ಪಡೆಯಬೇಕೆನ್ನುವ ನಿಯಮವನ್ನು ರದ್ದುಗೊಳಿಸಲು ಕೇರಳ ಸರಕಾರ ನಿರ್ಧರಿಸಿದೆ. ನಿನ್ನೆ ಸಭೆ ಸೇರಿದ್ದ ಸಚಿವಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಇದಕ್ಕಾಗಿ ಪಂಚಾಯತ್ ರಾಜ್ ಕಾನೂನಿನಲ್ಲಿ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಯುಡಿಎಫ್ ಸರಕಾರದ ಅವಧಿಯಲ್ಲಿ ಮದ್ಯದಂಗಡಿ ತೆರೆಯಲು ಗ್ರಾಮಪಂಚಾಯತ್ ಅನುಮತಿ ಕಡ್ಡಾಯ ಗೊಳಿಸಿ ಪಂಚಾಯತ್ ರಾಜ್ ಕಾನೂನಿಗೆ ತಿದ್ದುಪಡಿ ತರಲಾಗಿತ್ತು. ಸುಪ್ರೀಂಕೋರ್ಟು ತೀರ್ಪಿನ ಪ್ರಕಾರ ರಾಷ್ಟ್ರೀಯ ಹೆದ್ದಾರಿಯಿಂದ ಬೇರೆಡೆ ವರ್ಗಾಯಿಸಿದ ಮದ್ಯದಂಗಡಿಗಳಿಗೆ+
ಪಂಚಾಯತ್‌ಗಳಿಂದ ಅನುಮತಿಸಿಗುತ್ತಿರಲಿಲ್ಲ. ಸ್ಥಳೀಯರ ವಿರೋಧಕ್ಕೆ ಮಣಿದು ಪಂಚಾಯತ್ ಅನುಮತಿ ಕೊಡುತ್ತಿರಲಿಲ್ಲ. ಇವೆಲ್ಲವನ್ನು ಮನಗಂಡು ಪಂಚಾಯತ್‌ನ್ನು ಅನುಮತಿ ನೀಡುವ ವ್ಯಾಪ್ತಿಯಿಂದ ಹೊರಗಿಡುವ ನಿರ್ಧಾರಕ್ಕೆ ಸರಕಾರಬಂದಿದೆ.