ಬೀಡಾಡಿ ಹಸು ನಿರ್ವಹಣೆ ಅಧ್ಯಯನಕ್ಕೆ ವಿದೇಶ ಪ್ರವಾಸ!

Update: 2017-06-03 04:27 GMT

ಚಂಡೀಗಢ, ಜೂ.3: ಬೀಡಾಡಿ ಹಸುಗಳನ್ನು ನಿರ್ವಹಿಸುವುದು ಹೇಗೆ ಎಂಬ ಬಗ್ಗೆ ಅಧ್ಯಯನ ನಡೆಸಲು ಹರ್ಯಾಣ ಕೃಷಿ ಸಚಿವ ಓಂಪ್ರಕಾಶ್ ಧನ್‌ಕರ್ ನೇತೃತ್ವದ 12 ಮಂದಿಯ ನಿಯೋಗ ಆಸ್ಟ್ರೇಲಿಯಾ, ಫಿಜಿ ಹಾಗೂ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಳ್ಳಲು ನಿರ್ಧರಿಸಿದೆ.

ಕೃಷಿ ಹಾಗೂ ಪಶುಪಾಲನೆ ಬಗ್ಗೆ ಅಧ್ಯಯನಕ್ಕೆ ಈ ನಿಯೋಗ ಜೂನ್ 6ರಂದು ಪ್ರವಾಸ ಕೈಗೊಳ್ಳಲಿದೆ ಎಂದು ತಂಡದ ಸದಸ್ಯರಾಗಿರುವ ಜಾನುವಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ರಿಶಿ ಪ್ರಕಾಶ್ ಶರ್ಮಾ ಪ್ರಕಟಿಸಿದ್ದಾರೆ.

ಹರ್ಯಾಣದಲ್ಲಿರುವ ಬೀಡಾಡಿ ದನಗಳನ್ನು ಹೇಗೆ ನಿರ್ವಹಿಸಬಹುದು ಎಂಬ ಬಗ್ಗೆ ತಿಳಿದುಕೊಳ್ಳಲು ಸಂಶೋಧಕರು, ತಜ್ಞರು ಮತ್ತು ವಿವಿಧ ಕಂಪೆನಿಗಳ ಪ್ರತಿನಿಧಿಗಳನ್ನು ನಿಯೋಗ ಭೇಟಿ ಮಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜೂನ್ 19ರಂದು ಸ್ವದೇಶಕ್ಕೆ ಆಗಮಿಸುವ ತಂಡ ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆಗೆ ವರದಿ ಸಲ್ಲಿಸಲಿದೆ. ಮೂವರು ಶಾಸಕರಾದ ಮೂಲ್‌ಚಂದ್ ಶರ್ಮಾ, ಸುಭಾಶ್ಚಂದ್ರ ಹಾಗೂ ತೇಕ್‌ಚಂದ್ ಶರ್ಮಾ ಅವರೂ ನಿಯೋಗದಲ್ಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News