ರಮಝಾನ್ ಉಪವಾಸಿಗರಿಗೆ ತಂಪು ಪಾನೀಯ ವಿತರಿಸಿದ ಪಾಕಿಸ್ತಾನದ ಸಿಖ್ಖರು
Update: 2017-06-03 14:50 IST
ನವದೆಹಲಿ, ಜೂ. 3: ಮುಸ್ಲಿಮರ ಪವಿತ್ರ ರಮಝಾನ್ ತಿಂಗಳು ಉಪವಾಸ ಮತ್ತು ಪ್ರಾರ್ಥನೆಗೆ ಮಾತ್ರ ಮೀಸಲಾಗಿರದೆ ಈ ಅವಧಿಯಲ್ಲಿ ಶಾಂತಿ, ಸಾಮರಸ್ಯ ಸಹಬಾಳ್ವೆಯ ಸಂದೇಶ ಸಾ ಹಲವಾರು ಘಟನೆಗಳಿಗೆ ಈ ವಿಶ್ವ ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಕೇರಳದ ಹಿಂದೂ ದೇವಾಲಯವೊಂದು ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸಿ ಸುದ್ದಿಯಾಗಿದ್ದರೆ, ಇದೀಗ ಪಾಕಿಸ್ತಾನದ ಪೇಶಾವರ ನಗರದಲ್ಲಿ ಸಿಖ್ಖ್ ಸಮುದಾಯದ ಕೆಲ ಸದಸ್ಯರು ರಮಝಾನ್ ಉಪವಾಸ ಮುಗಿಸಿದ ಮುಸ್ಲಿಮರಿಗೆ ತಂಪು ಪಾನೀಯ ವಿತರಿಸುವ ಪೋಸ್ಟ್ ಒಂದು ವೈರಲ್ ಆಗಿದೆ.
ಫೇಸ್ ಬುಕ್ ಬಳಕೆದಾರರೊಬ್ಬರು ಎರಡು ಫೋಟೋಗಳನ್ನು ಪೋಸ್ಟ್ ಮಾಡಿ ‘‘ಇದು ಪಾಕಿಸ್ತಾನದ ನಿಜ ಮುಖ’’ ಎಂದೂ ಬರೆದಿದ್ದಾರೆ. ಚಿತ್ರದಲ್ಲಿ ಕಾಣಿಸುವ ಸಿಖ್ಖ್ ವ್ಯಕ್ತಿ ಯಾರು ಎಂದು ತಿಳಿದು ಬರದೇ ಇದ್ದರೂ ಈ ಫೋಟೋ ನೋಡಿ ಹಲವಾರು ಸಂತೋಷ ಪಟ್ಟಿದ್ದಾರೆ ಹಾಗೂ ಪಾಕಿಸ್ತಾನದಲ್ಲೂ ಮತೀಯ ಸಾಮರಸ್ಯ ಸಾಧ್ಯವಿದೆ ಎಂದು ಇದರಿಂದ ತಿಳಿಯುತ್ತದೆ ಎಂದು ಅಂದುಕೊಂಡಿದ್ದಾರೆ.