ರೋಜರ್ ಮೂರ್ ದೀರ್ಘ ಕಾಲದ ‘ಬಾಂಡ್’

Update: 2017-06-04 07:29 GMT

ಹಾಲಿವುಡ್ ಚಿತ್ರರಂಗವನ್ನು ಹಲವು ದಶಕಗಳ ಕಾಲ ಆಳಿದ ರೋಜರ್ ಮೂರ್ ಹುಟ್ಟಿದ್ದು, 1927ರಲ್ಲಿ ಸ್ಟಾಕ್‌ವೆಲ್‌ನಲ್ಲಿ; ಪೊಲೀಸ್ ಪೇದೆಯ ಮಗನಾಗಿ. ಆನಿಮೇಶನ್ ಸ್ಟುಡಿಯೊದಲ್ಲಿ ಇದ್ದ ಉದ್ಯೋಗದಿಂದ ಆರಂಭದಲ್ಲೇ ಕಿತ್ತುಹಾ ಕಲ್ಪಟ್ಟ ಅವರು, ಬಳಿಕ ಲಂಡನ್‌ನ ರಾಯಲ್ ಅಕಾಡಮಿ ಆಫ್ ಡ್ರೆಮ್ಯಾಟಿಕ್ ಅರ್ಟ್ ನಲ್ಲಿ ಅಧ್ಯಯನ ಮಾಡುವ ಅವಕಾಶ ಪಡೆದರು. ಬಳಿಕ ರಾಷ್ಟ್ರೀಯ ಸೇವೆಗೆ ಸಮರ್ಪಿಸಿಕೊಂಡರು. ಅವರೇ ಹೇಳಿಕೊಂಡಂತೆ, ಸಮವಸ್ತ್ರದಲ್ಲಿ ಚೆನ್ನಾಗಿ ಕಾಣು ತ್ತೇನೆ ಎಂಬ ಕಾರಣಕ್ಕೆ ಭಡ್ತಿಯೂ ದೊರಕಿತು.

ಇವರ ವೃತ್ತಿಜೀವನ ಆರಂಭವಾದ್ದು ಮಹಿಳಾ ಮ್ಯಾಗಝಿನ್‌ಗೆ ಮಾಡೆಲ್ ಆಗಿ. 1958ರಲ್ಲಿ ಟೆಲಿವಿಷನ್ ಧಾರಾವಾಹಿ ‘ಇವಾನ್‌ಹೊ’ದಿಂದ ಹಿಡಿದು, 1997ರ ‘ಸ್ಪೈಸ್ ಗರ್ಲ್ಸ್’ ಚಿತ್ರದ ವರೆಗೂ ನಾಲ್ಕು ದಶಕಗಳ ಕಾಲ ಅವರು ಜನಮನ ಗೆದ್ದಿದ್ದರು.
ಮೂರ್ ಅವರ ಅತ್ಯಂತ ಮಹತ್ವದ ಮೈಲುಗಲ್ಲು ಎಂದರೆ, ಮೊದಲು ‘ಸೈಂಟ್’ ಚಿತ್ರದಲ್ಲಿ ಪ್ಲೇಬಾಯ್ ಕಳ್ಳ ಸೈಮನ್ ಟೆಂಪ್ಲರ್ ಆಗಿ ಮಿಂಚಿದ್ದು ಹಾಗೂ ಬಳಿಕ ‘ದ ಪರ್ಸ್‌ವೇಡರ್ಸ್‌’ ಚಿತ್ರದಲ್ಲಿ ಪ್ಲೇಬಾಯ್ ಸೀಕ್ರೆಟ್ ಏಜೆಂಟ್ ಲಾರ್ಡ್ ಬ್ರೆಟ್ ಸಿಂಕ್ಲೇರ್ ಪಾತ್ರದಲ್ಲಿ ಗಮನ ಸೆಳೆದದ್ದು.

ಆದರೆ ಈ ಎಲ್ಲವೂ ಇಯಾನ್ ಫ್ಲೆಮಿಂಗ್ ಅವರ ಕಾಲ್ಪನಿಕ ಬ್ರಿಟಿಷ್ ಪತ್ತೇದಾರಿ ಚಿತ್ರಕ್ಕೆ ರಿಹರ್ಸಲ್ ಎನಿಸಿದವು. ‘ಬಾಂಡ್’ ಪಾತ್ರದಲ್ಲಿ ಕಾಣಿಸಿಕೊಂಡ ಏಳು ನಟರ ಪೈಕಿ ಇವರು ಅತಿದೀರ್ಘ ಕಾಲ ತೆರೆಯಲ್ಲಿ ಮಿಂಚಿದವರು.


ಕಠಿಣವಾದ ಪಾತ್ರವನ್ನು ಸರಳವಾಗಿ, ಲವ ಲವಿಕೆಯಿಂದ ನಿರ್ವಹಿಸುವುದು ಮೋರ್ ಅವರ ವೈಶಿಷ್ಟ. ಸಬ್‌ಮೆರಿನ್ ಕ್ರೊಕಡೈಲ್‌ಔಟ್‌ಫಿಟ್ ಧರಿಸುವುದು, ಗೋಂಡೊಲಾ ಆಕೃತಿಯ ಕಿರುನಾವೆಯಲ್ಲಿ ವೆನಿಸ್ ದಾಟು ವುದು ಹೀಗೆ ಪಾತ್ರದ ಕಾಠಿಣ್ಯಕ್ಕೆ ವಿರುದ್ಧವಾಗಿ ಕಾಣಿಸಿ ಕೊಳ್ಳುತ್ತಿದ್ದರು. ಅವರ ಹಿಂದಿನ ‘ಬಾಂಡ್’, ಸಿಯಾನ್ ಕಾನ್ರೆ ಅವರ ನಿರ್ದಯಿ ವ್ಯಕ್ತಿತ್ವದ ಬದ ಲಾಗಿ ಇವರು ಸೌಮ್ಯತೆಯ ಮುಖ ವಾಡ ಧರಿಸಿ ದ್ದರು. ಕಾಮನೆಯಿಂದ ಹಿಡಿದು, ಸಂದೇಹ ದವರೆಗಿನ ಭಾವನೆಗಳನ್ನು ಒಂಟಿ ಹುಬ್ಬು ಏರಿಸುವ ಮೂಲಕ ಪ್ರದರ್ಶಿ ಸುವುದು ಇವರ ‘ಬಾಂಡ್’ ಪಾತ್ರದ ಚಿರಪರಿಚಿತ ಅಂಶ. ಆದರೆ ವಿಲನ್‌ನನ್ನು ಕಲ್ಪಿಸಿಕೊಳ್ಳುವ ಮೂರ್ ಚಾಕಚಕ್ಯತೆ ಮಾತ್ರ ಅಮೋಘ. ಮೂರ್ ಅಂತಾರಾಷ್ಟ್ರೀಯ ಗೂಢಾಚಾರಿಯ ಎಲ್ಲ ಅಸಂಬದ್ಧತೆಗಳನ್ನೂ ತೋರಿಸುತ್ತಿದ್ದರು. ಅವರ ಫೆವರಿಟ್ ಕಾಕ್‌ಟೈಲ್ ವಿಶ್ವದ ಪ್ರತಿಯೊಬ್ಬ ಬಾರ್‌ಟೆಂಡರ್‌ಗಳಿಗೂ ಗೊತ್ತಿರುವಂಥದ್ದು. ಕಮಾನ್, ‘‘ಇಟ್ಸ್ ಆಲ್ ಎ ಬಿಗ್ ಜೋಕ್’’ ಎಂದು 2008ರ ಸಂದರ್ಶನವೊಂದರಲ್ಲಿ ಮೂರ್ ಬಣ್ಣಿಸಿದ್ದರು.


ತಮ್ಮ ನಟನಾ ಪರಾಕ್ರಮದ ಬಗ್ಗೆ ನಿರಂತರವಾಗಿ ಅಸ ಮಾಧಾನ ಹೊಂದಿದ್ದ ಅವರು, ‘ಬಾಂಡ್’ ಯುಗದ ಕೊನೆ ಯಲ್ಲಿ, ಶ್ರೇಷ್ಠ ಪ್ರೇಮಿಯ ಪಾತ್ರ ನಿರ್ವಹಿಸಲು ಕೂಡಾ ಅವಕಾಶ ಸಿಕ್ಕಿತ್ತು ಎಂದು ಹೇಳಿಕೊಂಡಿದ್ದಾರೆ. ‘ಆಕ್ಟೋಪಸ್ಸಿ’ ಚಿತ್ರದಲ್ಲಿ ಬಿಂಬಿತವಾದಂತೆ ಅವರು ಬಾಲ್ಯದಲ್ಲಿ ಎದುರಿಸಿದ ಕಡುಬಡತನ, ಬೆಳ್ಳಿತೆರೆಯ ಬದುಕಿನ ಬಳಿಕ ಅವರನ್ನು ಯುನಿಸೆಫ್ ರಾಯಭಾರಿಯಾಗಿ ಕಾ ರ್ಯ ನಿರ್ವಹಿಸುವಂತೆ ಪ್ರೇರೇಪಿಸಿತು. ಸ್ನೇಹಿತ ಆಡ್ರಿ ಹೆಪ್‌ಬರ್ನ್ ಅವರ ಸಲಹೆಯಂತೆ ಈ ಜವಾಬ್ದಾರಿ ವಹಿಸಿ ಕೊಂಡ ಮೂರ್ ಅವರ ಸೇವೆಗೆ 2003ರಲ್ಲಿ ಕಿಂಗ್‌ಹುಡ್ ಗರಿಯೂ ಸಿಕ್ಕಿತ್ತು.

ನಾಲ್ಕು ಬಾರಿ ವಿವಾಹವಾ ಗಿದ್ದ ಅವರು, ಕ್ಯಾನ್ಸರ್ ಜತೆಗಿನ ಅಲ್ಪಕಾಲದ ಹೋರಾಟದ ಬಳಿಕ ಜೀವನ ಪಯಣ ಮುಗಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News