ಉತ್ತರ ಪ್ರದೇಶ: ದೌರ್ಜನ್ಯಕ್ಕೊಳಗಾದ ಬಾಲಕಿಯರಿಗೆ ಲೈಂಗಿಕ ಕಿರುಕುಳ; ಕಾನ್ ಸ್ಟೇಬಲ್ ಬಂಧನ
Update: 2017-06-04 18:00 IST
ಲಕ್ನೋ, ಜೂ,4: ಲೈಂಗಿಕ ಕಿರುಕುಳಕ್ಕೊಳಗಾದ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಕಾನ್ ಸ್ಟೇಬಲ್ ನನ್ನು ಬಂಧಿಸಲಾಗಿದೆ. ಮಂಚದಲ್ಲಿ ಮಲಗಿದ್ದ ಕಾನ್ ಸ್ಟೇಬಲ್ ದೂರು ನೀಡಲು ಬಂದಿದ್ದ ಬಾಲಕಿಯರನ್ನು ಅಸಭ್ಯವಾಗಿ ಮುಟ್ಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಕಾನ್ ಸ್ಟೇಬಲ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು. ಆದರೆ ತಾನು ಬಾಲಕಿಯರಿಗೆ ಕಿರುಕುಳ ನೀಡಿಲ್ಲ ಎಂದು ಬಂಧಿತ ಕಾನ್ ಸ್ಟೇಬಲ್ ಈಶ್ವರಿ ಪ್ರಸಾದ್ ಹೇಳಿದ್ದಾರೆ. ಅವರನ್ನು ಮನೆಗೆ ಹೋಗುವಂತೆ ಹೇಳಿದ ನಾನು ಒಬ್ಬಾಕೆಯ ಕೈ ಮುಟ್ಟಿದ್ದೆ ಹೊರತು ಕಿರುಕುಳು ನೀಡಿಲ್ಲ” ಎಂದಿದ್ದಾರೆ.