ಬಸ್ ಸೇತುವೆಯಿಂದ ಕೆಳಗೆಬಿದ್ದು 26 ಮಂದಿಗೆ ಗಾಯ
ತಿರುವನಂತಪುರಂ,ಜೂ. 5: ತಿರುವನಂತಪುರಂನಿಂದ ಕೊಯಮತ್ತೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಆಟ್ಟಿಂಗಲ್ ಮಾಮಂ ಸೇತುವೆಯಿಂದ ಕೆಳಗೆ ಬಿದ್ದಿದೆ. ಪ್ರಯಾಣಿಕರಲ್ಲಿ 26 ಮಂದಿ ಗಾಯಗೊಂಡಿದ್ದಾರೆ. ಬಸ್ ಉರುಳುವಾಗ ಸೇತುವೆ ಕೆಳಭಾಗದಲ್ಲಿದ್ದ ಮರವೊಂದು ಅಡ್ಡವಿದ್ದುದರಿಂದ ಬಸ್ ಹೊಳೆಗೆ ಬಿದ್ದಿಲ್ಲ.
ರಾಷ್ಟ್ರೀಯ ಹೆದ್ದಾರಿ ಆಟ್ಟಿಂಗಲ್ ಮಾಮಂ ಸೇತುವೆಯ ಸಮೀಪದ ತಿರುವಿನಲ್ಲಿ ರವಿವಾರ ಹನ್ನೊಂದು ಗಂಟೆಗೆ ಅಪಘಾತ ಸಂಭವಿಸಿದೆ. ಸೇತುವೆಯ ಸ್ವಲ್ಪಮೊದಲು ಎದುರುಗಡೆಯಿಂದ ಬಂದ ಬಸ್‌ಗೆ ಸೈಡ್ ನೀಡುವ ಗೋಜಿನಲ್ಲಿ ಬಸ್ ನಿಯಂತ್ರಣ ಕಳಕೊಂಡಿತ್ತು. ಗಾಯಾಳುಗಳನ್ನು ಬೇರೆ ಬೇರೆಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಅಪಘಾತ ಕಂಡುಓಡಿ ಬಂದ ಊರವರೆಲ್ಲ ರಕ್ಷಣಾ ಕಾರ್ಯ ನಡೆಸಿದ್ದಾರೆ. ನಂತರ ಪೊಲೀಸರುಮತ್ತುಟ್ರಾಫಿಕ್ ಪೊಲೀಸರು ಬಂದಿದ್ದಾರೆ. ತುಂತುರು ಮಳೆ ಮತ್ತು ಅಲ್ಲಿದ್ದ ಕತ್ತಲು ಅಪಘಾತಕ್ಕೆ ಕಾರಣವೆನ್ನಲಾಗಿದ್ದು, ಒಂದುವೇಳೆ ಬಸ್ ಹೊಳೆಗೆ ಮಗುಚಿಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.