×
Ad

ಭೂತಚೇಷ್ಟೆ ಬಿಡಿಸುವ ಮಂತ್ರವಾದಿಯ ಕಪಟ ಪ್ರಯೋಗಕ್ಕೆ ಬಾಲಕಿ ಬಲಿ

Update: 2017-06-05 17:40 IST

ಅಸ್ಸಾಂ, ಜೂ.5: ಭೂತಚೇಷ್ಟೆ ಬಿಡಿಸಲು ಮಂತ್ರವಾದಿಯೊಬ್ಬ ಪದೇ ಪದೇ ಕೋಲಿನಿಂದ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.

ಕರೀಂಗಂಜ್ ಜಿಲ್ಲೆಯ ರತನ್ ಪುರದ ನಿವಾಸಿ ಅಸ್ಮಾನಾ ಬೇಗಂ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದಳು. ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲಾಗಿ ತಂದೆ ಆಕೆಯನ್ನು ಮಂತ್ರವಾದಿಯ ಬಳಿಗೆ ಕರೆದೊಯ್ದಿದ್ದಾನೆ. ಬಾಲಕಿಗೆ ಭೂತ ಹಿಡಿದಿದ್ದು, ಇದಕ್ಕೆ ಚಿಕಿತ್ಸೆಯ ಅಗತ್ಯವಿದೆ ಎಂದ ಮಂತ್ರವಾದಿ, 8ನೆ ತರಗತಿಯ ವಿದ್ಯಾರ್ಥಿನಿಯ ಮೈಮೇಲೆಗೆ ಬೆತ್ತದಿಂದ ಹೊಡೆದಿದ್ದಾನೆ. ದೇಹವಿಡೀ ಗಾಯಗಳಾಗಿದ್ದ ಪರಿಣಾಮ ತೀವ್ರ ಅಸ್ವಸ್ಥಗೊಂಡ ಅಸ್ಮಾನಾ ಮೃತಪಟ್ಟಿದ್ದಾಳೆ.

ಬಾಲಕಿಯ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News