×
Ad

ಪತ್ರಕರ್ತ ರಾಜಕುಮಾರ್ ರೇ ಅಪಘಾತಕ್ಕೆ ಬಲಿ

Update: 2017-06-05 17:41 IST

ಹೊಸದಿಲ್ಲಿ,ಜೂ.5: ಆರ್ಥಿಕ ಮತ್ತು ಉದ್ಯಮ ವಿಷಯಗಳಲ್ಲಿ ತಜ್ಞರೆಂಬ ಗೌರವಕ್ಕೆ ಪಾತ್ರರಾಗಿದ್ದ ಆಂಗ್ಲ ದೈನಿಕ ಹಿಂದುಸ್ಥಾನ ಟೈಮ್ಸ್‌ನ ಸಹ ಸಂಪಾದಕ ರಾಜಕುಮಾರ್ ರೇ(45) ಅವರು ರವಿವಾರ ದಿಲ್ಲಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಗೋವಿಂದಪುರಿ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕೊನೆಯುಸಿ ರೆಳೆದರು. ಆರೋಪಿ ಬೈಕ್ ಸವಾರ, ತುಘ್ಲಕಾಬಾದ್‌ನ ನಿವಾಸಿಯಾಗಿರುವ 18ರ ಹರೆಯದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಕಲಕತ್ತಾ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಬಳಿಕ ಈಕ್ವಿಟಿ ರೀಸರ್ಚರ್ ಆಗಿ ಕೆಲಸ ಮಾಡಿದ್ದ ರೇ 1997ರಲ್ಲಿ ಪತ್ರಿಕೋದ್ಯಮವನ್ನು ಪ್ರವೇಶಿಸಿದ್ದರು. ಪಿಟಿಐ, ಥಾಮ್ಸನ್ ರೂಟರ್ಸ್, ಫೈನಾನ್ಸಿಯಲ್ ಎಕ್ಸಪ್ರೆಸ್ ಮತ್ತು ಬ್ಲೂಮ್‌ಬರ್ಗ್ ಟಿವಿ ಇಂಡಿಯಾದಲ್ಲಿ ಕಾರ್ಯ ನಿರ್ವಹಿಸಿದ್ದ ಅವರು ಈ ವರ್ಷದ ಫೆಬ್ರವರಿಯಲ್ಲಿ ಹಿಂದುಸ್ಥಾನ ಟೈಮ್ಸ್ ಸೇರಿದ್ದರು. ಅವರು ಪತ್ನಿ ದೇವಯಾನಿ ಮತ್ತು ಆರರ ಹರೆಯದ ಪುತ್ರ ಅರಿಂಜಯ್ ಅವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News