ಉತ್ತರ ಪ್ರದೇಶ: ಮೊಗಲ್‌ಸರಾಯ್ ರೈಲ್ವೆ ನಿಲ್ದಾಣಕ್ಕೆ ಪಂಡಿತ್ ದೀನದಯಾಳ್ ಉಪಾಧ್ಯಾಯರ ಹೆಸರು

Update: 2017-06-07 12:11 GMT

ಲಕ್ನೊ,ಜೂ.7: ಉತ್ತರಪ್ರದೇಶ ವಾರಣಾಸಿ ಸಮೀಪದ ಮೊಗಲ್‌ಸರಾಯ್ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಮೊಗಲ್‌ಸರಾಯ್ ನಿಲ್ದಾಣದಹೆಸರನ್ನು ದಿವಂಗತ ಆರೆಸ್ಸೆಸ್ ಸಿದ್ಧಾಂತಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಹೆಸರಿಡಲು ಎಂದು ಬದಲಾಯಿಸಲು ರಾಜ್ಯಸರಕಾರ ನಿರ್ಧರಿಸಿದೆ. ಹೆಸರು ಬದಲಾಯಿಸಬೇಕೆನ್ನುವ ಮನವಿಯನ್ನು ಕೇಂದ್ರರೈಲ್ವೆ ಸಚಿವಾಲಯಕ್ಕೆ ಸಮರ್ಪಿಸಲಾಗುವುದು ಎಂದು ಸಚಿವ ಸಿದ್ಧಾರ್ಥನಾಥ್ ಸಿಂಗ್ ತಿಳಿಸಿದ್ದಾರೆ.

 ಮಂಗಳವಾರ ಯೋಗಿ ಆದಿತ್ಯನಾಥ್‌ರ ಅಧ್ಯಕ್ಷತೆಯಲ್ಲಿ ಸೇರಿದ ಸಚಿವ ಸಂಪುಟ ಸಭೆಯಲ್ಲಿ ರೈಲ್ವೆ ನಿಲ್ದಾಣದ ಹೆಸರು ಬದಲಾಯಿಸಲು ಕೇಂದ್ರಸರಕಾರಕ್ಕೆ ಮನವಿ ಮಾಡಲು ತೀರ್ಮಾನಿಸಲಾಗಿತ್ತು.

1968 ಫೆಬ್ರವರಿ 11ಕ್ಕೆ ದೀನ ದಯಾಳ್ ಉಪಾಧ್ಯಾಯರು ನಿಗೂಢವಾಗಿ ಮೊಗಲ್‌ಸರಾಯ್ ನಿಲ್ದಾಣದಲ್ಲಿ ಕೊಲೆಯಾಗಿದ್ದರು. ದೀನನಾಥರ ನೂರನೆ ಜನ್ಮದಿನಾಚರಣೆಯ ಪ್ರಯುಕ್ತ ಅವರ ಹೆಸರು ಇಡಲು ಸರಕಾರ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News