ಇಫ್ತಾರ್ ಪಾರ್ಟಿಗೆ “ಮಟನ್” ತೆಗೆದುಕೊಂಡು ಹೋಗುತ್ತಿದ್ದವನನ್ನು ತಡೆದು ಹಲ್ಲೆ ನಡೆಸಿದ ದುಷ್ಕರ್ಮಿಗಳು

Update: 2017-06-07 12:41 GMT

ಜಾರ್ಖಂಡ್,  ಜೂ.7: ಇಫ್ತಾರ್ ಗಾಗಿ ಮಟನ್ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದ ಘಟನೆ ಜಾರ್ಖಂಡ್ ನ ಧನ್ ಬದ್ ಜಿಲ್ಲೆಯ ಬರ್ಬದ್ದಾ ಗ್ರಾಮದಲ್ಲಿ ನಡೆದಿದೆ.

ಘಟನೆಯಿಂದ ಗಂಭೀರವಾಗಿ ಗಾಯಗೊಂಡ 35 ವರ್ಷದ ಐನುಲ್ ಅನ್ಸಾರಿರವರನ್ನು ಪಾಟಲೀಪುತ್ರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನ್ಸಾರಿ ಬರ್ಬದ್ದಾ ಗ್ರಾಮಕ್ಕೆ ಸ್ಕೂಟರ್ ನಲ್ಲಿ ಆಗಮಿಸುತ್ತಿದ್ದ ಸಂದರ್ಭ ಅವರನ್ನು ತಡೆದ ಗುಂಪೊಂದು ದಾಳಿ ನಡೆಸಿತು. ಈ ಸಂದರ್ಭ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಅನ್ಸಾರಿಯನ್ನು ರಕ್ಷಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅನ್ಸಾರಿಯವರ ಪತ್ನಿ ಶಹೀದಾ ಬೇಗಂ, “ಮಂಗಳವಾರ ನಾವು ನಮ್ಮ ಮನೆಯಲ್ಲಿ ಇಫ್ತಾರ್ ಕಾರ್ಯಕ್ರಮವನ್ನು ಆಯೋಜಿಸುವ ಸಿದ್ಧತೆಯಲ್ಲಿದ್ದೆವು. ಅನ್ಸಾರಿ ಮಟನ್ ಮಾಂಸವನ್ನು ತರುತ್ತಿದ್ದರು. ಆದರೆ ಬೀಫ್ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News