ಪಶ್ಚಿಮ ಬಂಗಾಳ: ಸಿಐಡಿ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿರುವ ನಕಲಿ ವೈದ್ಯರೆಷ್ಟು ಗೊತ್ತೇ?
Update: 2017-06-07 18:33 IST
ಪಶ್ಚಿಮ ಬಂಗಾಳ, ಜೂ.6: ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನಕಲಿ ವೈದ್ಯರು ಹಾಗೂ ನಕಲಿ ವೈದ್ಯಕೀಯ ಸಂಸ್ಥೆಗಳ ವಿವರವನ್ನು ಸಿಐಡಿ ಬಿಡುಗಡೆಗೊಳಿಸಿದೆ.
“ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಭಾರೀ ಸಂಖ್ಯೆ ನಕಲಿ ವೈದ್ಯರಿರುವುದು ಬೆಳಕಿಗೆ ಬಂದಿದೆ. ಏಳರಿಂದ ಎಂಟು ನಕಲಿ ವೈದ್ಯಕೀಯ ಸಂಸ್ಥೆಗಳು ಹಾಗೂ ಸುಮಾರು 500 ನಕಲಿ ವೈದ್ಯರು ರಾಜ್ಯದಲ್ಲಿದ್ದಾರೆ” ಎಂದು ಸಿಐಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಕಲಿ ವೈದ್ಯರು ಹಾಗೂ ಸಂಸ್ಥೆಗಳ ಬಗೆಗಿನ ವರದಿ ಸಿದ್ಧವಾಗಿದ್ದು, ಅದನ್ನು ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಸ್ಟೇಟ್ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ನಿರ್ಮಲ್ ಮಜಿ ಹೇಳಿದ್ದಾರೆ. ಈ ಬಗ್ಗೆ ಸಂಬಂಧಿಸಿದಂತೆ ಆರು ಮಂದಿ ನಕಲಿ ವೈದ್ಯರನ್ನು ಬಂಧಿಸಲಾಗಿದೆ.