ಪತ್ನಿಗೆ ಅಧಿಕಾರ ವಹಿಸಿಕೊಟ್ಟ ಕೊಲ್ಲಂ ಕಮಿಶನರ್

Update: 2017-06-08 09:17 GMT

ಕೊಲ್ಲಂ,ಜೂ. 8: ಬುಧವಾರ ಬೆಳಗ್ಗೆ ಕೇರಳ ಪೊಲೀಸ್ ಇತಿಹಾಸದಲ್ಲೇ ಅಪೂರ್ವವಾದ ಘಟನೆಯೊಂದಕ್ಕೆ ಕೊಲ್ಲಂ ಕಮಿಶನರ್ ಕಚೇರಿ ಸಾಕ್ಷಿಯಾಗಿದೆ.ಸಿಟಿ ಪೊಲೀಸ್ ಕಮಿಶನರ್ ಸತೀಶ್‌ಬಿನೊ ತನ್ನ ಪತ್ನಿ ಅಜಿತಾಬೇಗಂರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಕೇರಳ ಪೊಲೀಸ್ ಇತಿಹಾಸದಲ್ಲಿ ಪತಿಯೊಬ್ಬ ಪತ್ನಿಗೆ ಅಧಿಕಾರ ಹಸ್ತಾಂತರಿಸಿದ್ದು ಇದೇ ಪ್ರಥಮ ಎನ್ನಲಾಗಿದೆ. ಈವರೆಗೂ ಕೊಟ್ಟಾರಕರ ಗ್ರಾಮೀಣ ಎಸ್ಪಿ ಆಗಿದ್ದ ಅಜೀತಾ ಹೆರಿಗೆ ರಜೆಯಲ್ಲಿ ತೆರಳಿದ್ದರು.

 ಸತೀಶ್ ಬಿನೊ ಮತ್ತುಅಜೀತಾ ಬೇಗಂ ಇಬ್ಬರೂ ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಈಗಿರುವ ಯೋಜನೆಯನ್ನು ಕ್ರಿಯಾಶೀಲಗೊಳಿಸುತ್ತೇನೆ. ಟ್ರಾಫಿಕ್ ವ್ಯವಸ್ಥೆ ಹೆಚ್ಚುಸಕ್ಷಮಗೊಳಿಸುವೆ ಎಂದು ಸಿಟಿ ಕಮಿಶನರ್ ಆಗಿ ಅಧಿಕಾರವಹಿಸಿಕೊಂಡಬಳಿಕ ಅಜೀತಾ ಬೇಗಂ ಹೇಳಿದರು. ಹೆಣ್ಣುಮಕ್ಕಳ ಮೇಲೆ ಅತಿಹೆಚ್ಚು ದೌರ್ಜನ್ಯ ಕೇರಳದಲ್ಲಿ ನಡೆಯುತ್ತಿದೆಎಂದು ಕೇಸುಗಳುದಾಖಲಾಗುತ್ತಿವೆ. ಮಹಿಳೆಯರು ಕೇಸುದಾಖಲಿಸಲು ಮುಂದೆ ಬರುವುದೇ ಇದಕ್ಕೆ ಕಾರಣವೆಂದು ಅಜೀತಾಹೇಳಿದರು. ನಿರ್ಗಮನ ಕಮಿಶನರ್ ಸತೀಶ್ ಬಿನೊ ಒಂದುವರ್ಷ ಕೊಲ್ಲಂನಲ್ಲಿ ಕೆಲಸಮಾಡಿದ ತೃಪ್ತಿ ಇದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News